ಹರಿಯಾಣದಲ್ಲಿರುವ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದ ಮೇಲೆ ದೆಹಲಿ ರೈತ ಹೋರಾಟದ ಪ್ರಭಾವ ಬೀರುತ್ತಿದೆ. ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಸೇರಿ ಹಲವು ಜಾಟ್ ಮುಖಂಡರು ರೈತ ಹೋರಾಟ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ನ ರಾಕೇಶ್ ಟಿಕಾಯತ್ ಅವರಿಗೆ ಬೆಂಬಲ ನೀಡುವುದಾಗಿ ಜೆಜೆಪಿ ಮುಖಂಡರು ಬಹಿರಂಗ ಹೇಳಿಕೆ ನೀಡುತ್ತಿದ್ದು, ದೆಹಲಿ ಗಡಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಗನ್ ಹಿಡಿದು ಲಾರಿ ಚಾಲಕನನ್ನು ಬೆದರಿಸಿದ ಶಿವಸೇನೆ ಕಾರ್ಯಕರ್ತರು
ಜನನಾಯಕ ಜನತಾ ಪಾರ್ಟಿಯ ಯುವ ಘಟಕದ ಮುಖಂಡ ದಿಗ್ವಿಜಯ ಸಿಂಗ್ ಚೌಟಾಲಾ ಅವರು ಟಿಕಾಯತ್ ಅವರನ್ನು “ನಿಜವಾದ ದೇಶ ಭಕ್ತ” ಎಂದು ಶ್ಲಾಘಿಸಿದ್ದಾರೆ. ಜೆಜೆಪಿಯ 30 ಕ್ಕೂ ಹೆಚ್ಚು ಎಂಎಲ್‌ಎ ಗಳು ರೈತ ಕುಟುಂಬದಿಂದ ಬಂದವರಾಗಿದ್ದು, ಅವರು ಸಮ್ಮಿಶ್ರ ಸರ್ಕಾರ ಬಿಡಲು ಸಜ್ಜಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.