ನವದೆಹಲಿ: 74 ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ಈ ಬಾರಿ ಸ್ವಾತಂತ್ರ್ಯೋತ್ಸವ ಎಂದಿನಂತೆ ಅದ್ದೂರಿಯಾಗಿ ಇರುವುದಿಲ್ಲ. ಇಡೀ ವಿಶ್ವ ಕೊರೊನಾದಿಂದ ತತ್ತರಿಸಿದ ಹಿನ್ನೆಲೆಯಲ್ಲಿ ಸರಳವಾಗಿ ಸ್ವಾತಂತ್ರೋತ್ಸವ ಆಚರಿಸಲಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಕ್ರಮಕೈಗೊಳ್ಳಲಾಗಿದ್ದು, ಕೊರೋನಾ ವಾರಿಯರ್ಸ್ ದೇಶದ ಜನತೆಯ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ.
ಮಹಾಮಾರಿ ಕೊರೊನಾದಿಂದ ಜನ ತತ್ತರಿಸಿಹೋಗಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಜೀವ ಜೀವನಕ್ಕೆ ಆಧ್ಯತೆ ಅಗತ್ಯ. ಜನತೆಯ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿ ಯೋಜನೆ ಹಲವು ಮಹತ್ವದ ಯೋಜನೆಯನ್ನು ಘೋಷಿಸಿದೆ. ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ವಂದೇ ಭಾರತ್ ಮಿಷನ್ ಅಡಿ ವಿದೇಶಗಳಲ್ಲಿರುವ ಭಾರತೀಯರು ವಾಪಸ್ ಬರಲು ವ್ಯವಸ್ಥೆ ಮಾಡಲಾಗಿದೆ. ವಿದೇಶಗಳಲ್ಲಿರುವ 10 ಲಕ್ಷ ಭಾರತೀಯರು ವಾಪಸ್ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ನಮನಗಳು. ಯೋಧರ ಬಲಿದಾನವನ್ನು ಇಡೀ ದೇಶವೇ ಸ್ಮರಿಸುತ್ತಿದೆ. ಗಾಂಧೀಜಿಯ ಚಿಂತನೆಗಳು ಯುವ ಪೀಳಿಗೆಗೆ ಮಾರ್ಗದರ್ಶನವಾಗಿವೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.