ಛತ್ತೀಸ್ ಗಢದ ಕೊಂಡಗಾಂವ್ ನಲ್ಲಿ ನಡೆದ ಈ ಘಟನೆ ಭಾರತದಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸುವ ನಿರಾಸಕ್ತಿಯ ವ್ಯವಸ್ಥೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಮೋಹನ್ ಬೇಡಾ ಗ್ರಾಮದಲ್ಲಿ ರಸ್ತೆಗಳು ಇಲ್ಲದ ಕಾರಣ ಆರೋಗ್ಯ ಕಾರ್ಯಕರ್ತರು ತಾತ್ಕಾಲಿಕ ಬುಟ್ಟಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗ್ರಾಮಕ್ಕೆ ರಸ್ತೆಯಿಲ್ಲದ ಹಿನ್ನಲೆ ಆಂಬುಲೆನ್ಸ್ ಬಂದಿಲ್ಲ. ಇದರಿಂದಾಗಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಬುಟ್ಟಿಯಲ್ಲಿ ಕರೆದುಕೊಂಡು ಹೋಗಲಾಗಿದೆ.
ಕೊಂಡಗಾಂವ್ ನ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಟಿ.ಆರ್. ಕನ್ವಾರ್ ಈ ಕುರಿತು ಮಾಹಿತಿ ನೀಡಿದ್ದು, ಆಂಬುಲೆನ್ಸ್ ಗೆ ಅವರು ಕರೆ ಮಾಡಿದ್ದರು. ಆದರೆ, ರಸ್ತೆಯಿಲ್ಲದ ಕಾರಣ ಆಂಬುಲೆನ್ಸ್ ತೆರಳಲು ಸಾಧ್ಯವಾಗಲಿಲ್ಲ. ಅದು ದೂರದ ಪ್ರದೇಶವಾಗಿದ್ದು, ವಾಹನಗಳು ಅಲ್ಲಿಗೆ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಟ್ಟಿಯಲ್ಲಿ ಕರೆತರಲಾಗಿದೆ. ತಾಯಿ, ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಹೆರಿಗೆ ನಂತರ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.