ಚಮೋಲಿ: ಹಿಮಪಾತದಿಂದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ದೌಲಿಗಂಗಾ ನದಿಯಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದುವರೆಗೆ 6 ಜನರು ಮೃತಪಟ್ಟ ಮಾಹಿತಿ ಇದ್ದು 150 ಕ್ಕೂ ಅಧಿಕ ಜನ ಪ್ರವಾಹದಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.
ಕಣಿವೆ ನಾಡಿನಲ್ಲಿ ಉಂಟಾದ ಈ ಭಯಾನಕ ಪ್ರವಾಹದ ವಿಡಿಯೋಗಳು ಜಾಲತಾಣಗಳಲ್ಲೂ ಪ್ರವಾಹದಂತೆ ಹರಿಯುತ್ತಿವೆ. ಗಂಗೆ ರೌದ್ರಾವತಾರ ತಾಳಿ ಮುನ್ನುಗ್ಗುತ್ತಿರುವ ವಿಡಿಯೋಗಳು ನೆಟ್ಟಿಗರನ್ನು ನಡುಗಿಸಿದೆ. ಸಾಕಷ್ಟು ಜನ ವಿಡಿಯೋ ಫೋಟೋಗಳನ್ನು ಶೇರ್ ಮಾಡಿ ದೇವರೇ ಜನರನ್ನು ರಕ್ಷಿಸು ಎಂದು ಪ್ರಾರ್ಥನೆ ಮಾಡಿದ್ದಾರೆ. ಇನ್ನೂ ಹಲವರು ಸಹಾಯವಾಣಿ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ.
ಉತ್ತರಾಖಂಡ್ ಹಿಮ ಕುಸಿತದಿಂದ ಭಾರೀ ಅನಾಹುತ -10 ಮೃತದೇಹ ಪತ್ತೆ – ನಾಪತ್ತೆಯಾದ 100 ಮಂದಿಗೆ ಶೋಧ
ಘಟನೆ ನಡೆದ ಸ್ಥಳಕ್ಕೆ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಭೇಟಿ ನೀಡಿದ್ದಾರೆ. ಜನರ ರಕ್ಷಣೆಗೆ ಐಟಿಬಿಪಿ ಧಾವಿಸಿವೆ. ನದಿಯ ಅಬ್ಬರದ ಪರಿಣಾಮ ಶೀಘ್ರದಲ್ಲಿ ಕಾಶಿವರೆಗೂ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಗಂಗಾ ನದಿಯ ಇಕ್ಕೆಲಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.