ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಬ್ಸಿಡಿ ಬಿಡುಗಡೆ ವಿಳಂಬವಾದ ಕಾರಣ ಸಾವಿರಾರು ಫಲಾನುಭವಿಗಳು ಅತಂತ್ರರಾಗಿರುವ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹು ಮಹತ್ವಕಾಂಕ್ಷೆಯ ವಸತಿ ಯೋಜನೆಯಡಿ ಮಹಾರಾಷ್ಟ್ರದಲ್ಲಿ ಮಂಜೂರಾದ 2.19 ಲಕ್ಷ ಮನೆಗಳ ಪೈಕಿ ಕೇವಲ 22,000 ಮನೆಗಳಷ್ಟೇ ಪೂರ್ಣಗೊಂಡಿದೆ. ಹೆಚ್ಚಿನ ಫಲಾನುಭವಿಗಳು ಅಥವಾ ಕೆಲಸ ಮುಗಿಸಿದವರು ಕೇಂದ್ರದ 1.5 ಲಕ್ಷ ರೂ. ಸಬ್ಸಿಡಿಗಾಗಿ ಕಾಯುತ್ತಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವ ವೇಳೆ, ಅಂದರೆ 2022ರ ವೇಳೆಗೆ ನಗರ ಪ್ರದೇಶದಲ್ಲಿ ಎಲ್ಲರೂ ಮನೆ ಹೊಂದಿರಬೇಕು ಎಂಬ ಕಲ್ಪನೆಯಲ್ಲಿ ಪಿಎಂಎವೈ ಯೋಜನೆ ಜಾರಿಯಾಗುತ್ತಿದೆ.
ಹೊಸ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಪ್ರತಿ ಫಲಾನುಭವಿಗೆ ಒಂದೂವರೆ ಲಕ್ಷ ರೂ.ಗಳ ನೆರವು ನೀಡುತ್ತದೆ. ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ಈ ಮನೆಗಳಿಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ನೆರವು ನೀಡಲಿದೆ.
ಮಹಾರಾಷ್ಟ್ರದ ನಗರಸಭೆ ಪುರಸಭೆ ಮತ್ತು ನಗರ ಪಂಚಾಯಿತಿಗಳು ಸೇರಿ 350 ನಗರ ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ 2016ರಿಂದ 2.19 ಲಕ್ಷ ಫಲಾನುಭವಿ ಗುರುತಿಸಲಾಗಿದೆ.
ಸೂರು ಕಟ್ಟಿಕೊಳ್ಳುವ ಆಸೆಯಿಂದ ಉತ್ಸಾಹ ತೋರಿದ್ದ ಜನತೆಗೆ ಈಗ ನಿರಾಸೆಯಾಗಿದೆ. 22 ಸಾವಿರ ಮನೆಗಳಷ್ಟೇ ಪೂರ್ಣಗೊಂಡಿರುವುದು ಇದಕ್ಕೆ ಉದಾಹರಣೆ. ಅಧಿಕಾರಿಗಳು ಯೋಜನೆಗೆ ಹಣದ ಕೊರತೆಯಿಲ್ಲ ಎಂದು ಹೇಳುತ್ತಾರೆ. ಆದರೆ ಸ್ಥಳೀಯ ಸಂಸ್ಥೆಗಳು ಈ ಹಿಂದೆ ಬಿಡುಗಡೆಯಾದ ನಿಧಿಗಳಿಗೆ ಬಳಕೆಯ ಪ್ರಮಾಣ ಪತ್ರ ಸಲ್ಲಿಸಲು ವಿಫಲವಾಗಿವೆ ಹೀಗಾಗಿ ಹಣ ಬಿಡುಗಡೆಯಾಗುತ್ತಿಲ್ಲ.
ಕೋವಿಡ್-19 ಸಂಕ್ರಾಮಿಕ ರೋಗ ಮತ್ತು ದೀರ್ಘಕಾಲೀನ ಪರಿಣಾಮ ಫಲಾನುಭವಿಗಳು ತಮ್ಮ ಪಾಲಿನ ಹಣವನ್ನು ಮನೆಗಳಿಗೆ ಹಾಕಲು ಸಾಧ್ಯವಾಗಿಲ್ಲ. ಹೀಗಾಗಿ ಅರ್ಧಂಬರ್ಧ ಮನೆಗಳಲ್ಲೆ ಅವರು ಜೀವನ ಸಾಗಿಸುವಂತಾಗಿದೆ.