
ಆದರೆ ಈ ಫ್ಯಾಷನ್ ಜಗತ್ತಿಗೆ ಇದೀಗ ಹೊಸ ವಿನ್ಯಾಸದ ಪ್ಯಾಂಟ್ ಒಂದು ಸೇರ್ಪಡೆಯಾಗಿದೆ. ಅಂದಹಾಗೆ ಈ ಪ್ಯಾಂಟನ್ನ ನಿರ್ಮಾಣ ಮಾಡಿರೋದು ಸೆಣಬಿನ ದಾರದಲ್ಲಿ ಅಂದರೆ ನೀವು ನಂಬಲೇಬೇಕು. ಮಾರುಕಟ್ಟೆಯಲ್ಲಿ ತರಕಾರಿ ಸಾಗಿಸುವ ಚೀಲದಂತೆ ಕಾಣುವ ಈ ಪ್ಯಾಂಟ್ ಇದೀಗ ಫ್ಯಾಶನ್ ಅಂತೆ. ಈ ವಿಚಿತ್ರ ಪ್ಯಾಂಟ್ನ್ನ ಫೋಟೋ ಶೇರ್ ಮಾಡಿದ ಟ್ವೀಟಿಗರೊಬ್ಬರು ಆಶ್ಚರ್ಯ ಹೊರಹಾಕಿದ್ದಾರೆ.
ಟ್ವಿಟರ್ನಲ್ಲಿ ಸದಾ ಸುದ್ದಿಯಲ್ಲಿರುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್, ನನ್ನ ಅಮ್ಮ ಈ ಪ್ಯಾಂಟ್ ನೋಡಿಬಿಟ್ಟರೆ ಅವಳು ನಾಲ್ಕೈದು ಚೀಲ ತೆಗೆದುಕೊಂಡು ಇದೇ ರೀತಿ ಪ್ಯಾಂಟ್ ಹೊಲಿದು ಬಿಡ್ತಾಳೆ ಅಂತಾ ತಮಾಷೆ ಮಾಡಿದ್ದಾರೆ.