ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಕಳೆದ ಆರು ತಿಂಗಳಿಂದ ಶಾಲೆಗಳು ಬಂದ್ ಆಗಿವೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಪಾಠವನ್ನು ಹೇಳಲಾಗ್ತಿದೆ. ಆದ್ರೆ ಆನ್ಲೈನ್ ಕ್ಲಾಸ್ ನಲ್ಲಿ ಅನೇಕ ಯಡವಟ್ಟುಗಳು ನಡೆಯುತ್ತವೆ. ಇದಕ್ಕೆ ಮಧ್ಯಪ್ರದೇಶದ ಶಿಯೋಪುರ ಸಾಕ್ಷಿಯಾಗಿದೆ.
ಅಲ್ಲಿ ವಾಟ್ಸಾಪ್ ಗ್ರೂಪ್ ನಲ್ಲಿ ಮಕ್ಕಳಿಗೆ ಆನ್ಲೈನ್ ಪಾಠ ಹೇಳಿಕೊಡಲಾಗ್ತಿತ್ತು. ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಪೋರ್ನ್ ಚಿತ್ರ ಪ್ರಸಾರವಾಗಿದೆ. ಮೊಬೈಲ್ ನಲ್ಲಿ ಪೋರ್ನ್ ಚಿತ್ರ ಪ್ರಸಾರವಾಗ್ತಿದ್ದಂತೆ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಘಟನೆ ನಂತ್ರ ಪೋಷಕರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕಿ ತರಗತಿ ತೆಗೆದುಕೊಂಡಿದ್ದರಂತೆ. ತಕ್ಷಣ ಶಿಕ್ಷಕಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರಂತೆ. ಘಟನೆ ನಂತ್ರ ಆನ್ಲೈನ್ ಕ್ಲಾಸ್ ಬಂದ್ ಮಾಡಲಾಗಿದ್ದು, ಈ ಬಗ್ಗೆ ವಿಚಾರಣೆ ಶುರುವಾಗಿದೆ.