ಇದು ಅಂತಿಂಥಾ ಮುಳ್ಳುಹಂದಿಯಲ್ಲ. ತನ್ನ ವಿರುದ್ಧ ಹೋರಾಟಕ್ಕೆ ಬಂದ ಘಟಸರ್ಪವನ್ನೇ ಚುಚ್ಚೋಡಿಸಿದ ಚತುರ.
ಕಾಡಿನಲ್ಲಿ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ. ಆದರೆ, ಮನುಷ್ಯರ ಕಣ್ಣಿಗೆ ಬೀಳುವುದು ಅಪರೂಪ.
ಹೌದು, ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ಅವರು ಟ್ವಿಟ್ಟರ್ ನಲ್ಲಿ ಹರಿಬಿಟ್ಟಿರುವ 11 ಸೆಕೆಂಡಿನ ಈ ವಿಡಿಯೋ ಭಾರೀ ವೈರಲ್ ಆಗಿದೆ. ಮೂರು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಅನೇಕರು ರೀಟ್ವೀಟ್ ಸಹ ಮಾಡಿದ್ದಾರೆ.
ತನ್ನೆದುರು ಹೋರಾಟಕ್ಕೆ ನಿಂತಿರುವುದು ಘಟಸರ್ಪವೇ ಆಗಿದ್ದರೂ ವಿಚಲಿತಗೊಳ್ಳದ ಮುಳ್ಳುಹಂದಿ, ಕಾಳಗಕ್ಕಿಳಿದ ಮೇಲೆ ಸೋಲೊಪ್ಪುವ ಮಾತೇ ಇಲ್ಲ ಎಂಬ ಹಠಕ್ಕೆ ಬಿದ್ದಂತೆ ಹೋರಾಡಿತು. ಕಚ್ಚಲು ಬಂದ ಹಾವಿಗೆ, ತನ್ನ ಮೈಮೇಲಿನ ಮೊನಚಾದ ಮುಳ್ಳುಗಳಿಂದಲೇ ತಕ್ಕ ಉತ್ತರ ಕೊಟ್ಟು ಅಟ್ಟಿತು. ಕೊನೆಗೂ ಮುಳ್ಳುಹಂದಿಯೇ ಗೆದ್ದಿತು.
ಇದರಿಂದ ಮನುಷ್ಯರು ಕಲಿಯಬೇಕಾದ ಪಾಠವೂ ಇದೆ. ಸಂದರ್ಭ ಯಾವುದು ? ಹೇಗಿದೆ ಎಂಬುದೆಲ್ಲಕ್ಕಿಂತ ಆಯಾ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ? ಬುದ್ಧಿವಂತಿಕೆ ಉಪಯೋಗಿಸಬೇಕು ? ಸಮಯಕ್ಕೆ ಸರಿಯಾಗಿ ಭಯ ಬಿಟ್ಟು ಚತುರತೆಯಿಂದ ನಮ್ಮ ಶಕ್ತಿಯನ್ನರಿತು ಪ್ರಯೋಗಿಸಿದರೆ ಯಶಸ್ಸಿನ ನಮ್ಮ ಪಾಲಾಗುತ್ತದೆ ಎಂಬುದನ್ನರಿಯಬೇಕು.