ಸದ್ಯ ಬಹುತೇಕ ಶಾಲೆಗಳಲ್ಲಿ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಸಂಪರ್ಕವಿಲ್ಲದ ಮಕ್ಕಳು ಇದ್ರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಸಾಕಷ್ಟು ಕಷ್ಟಪಡ್ತಿದ್ದಾರೆ. ಇದಕ್ಕೆ ಈ ಘಟನೆ ಉದಾಹರಣೆ.
ಹಿಮಾಚಲ ಪ್ರದೇಶದ ಪಾಲಂಪುರ ಜಿಲ್ಲೆಯಲ್ಲಿ ಮಗನ ಆನ್ಲೈನ್ ಕ್ಲಾಸ್ ಗಾಗಿ ಪಾಲಕರು ಮನೆಯಲ್ಲಿದ್ದ ಹಸು ಮಾರಿದ್ದಾರೆ. ಅವ್ರ ಜೀವನಕ್ಕೆ ಇದೇ ಆಧಾರವಾಗಿತ್ತು. ಆದ್ರೆ ಇದನ್ನು ಮಾರಾಟ ಮಾಡಿದ್ದಕ್ಕೆ ಅವರಿಗೆ ಸಿಕ್ಕಿದ್ದು 6 ಸಾವಿರ ಮಾತ್ರ. ಅದ್ರಲ್ಲಿಯೇ ಮೊಬೈಲ್ ಖರೀದಿ ಮಾಡಿ, ಮಗನಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ.
ಕುಲ್ದೀಪ್ ಗೆ ಇಬ್ಬರು ಮಕ್ಕಳು. ಮಗ 4ನೇ ಕ್ಲಾಸ್ ನಲ್ಲಿ ಓದುತ್ತಿದ್ದಾನೆ. ಮಗನ ಆನ್ಲೈನ್ ಕ್ಲಾಸ್ ಶುರುವಾಗ್ತಿದ್ದಂತೆ ಶಾಲೆಯಲ್ಲಿ ಸ್ಮಾರ್ಟ್ಫೋನ್ ಖರೀದಿಗೆ ಒತ್ತಡ ಹೆಚ್ಚಾಗಿತ್ತಂತೆ. 500 ರೂಪಾಯಿ ಕೈನಲ್ಲಿರದ ಸಮಯದಲ್ಲಿ ಕುಲ್ದೀಪ್ ಅನೇಕರ ಬಳಿ ಹಣ ಸಾಲ ಕೇಳಿದ್ದಾನೆ. ಆದ್ರೆ ಯಾರೂ ಹಣ ನೀಡದ ಕಾರಣ ಹಸು ಮಾರಾಟ ಮಾಡಿದ್ದಾನೆ. ಆದ್ರೀಗ ಮುಂದಿನ ಜೀವನ ಹೇಗೆ ಎಂಬ ಚಿಂತೆ ಶುರುವಾಗಿದೆ.