ಹತ್ರಾಸ್: ಅತ್ಯಾಚಾರ ಕೊಲೆ ಪ್ರಕರಣಕ್ಕೆ ಪೊಲೀಸರ ನಡೆದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪ್ರಕರಣದಲ್ಲಿ ರಾಜಕೀಯ ಆರೋಪ, ಪ್ರತ್ಯಾರೋಪವೂ ಮುಂದುವರೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವತ್ತು ಯುವತಿ ಕುಟುಂಬದವರನ್ನು ಭೇಟಿಯಾಗಲು ಎರಡನೇ ಪ್ರಯತ್ನ ನಡೆಸಿದ್ದಾರೆ. ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಹತ್ರಾಸ್ ಗೆ ತೆರಳುವಾಗ ಪೊಲೀಸರು ತಡೆಯುವುದನ್ನು ತಪ್ಪಿಸಿಕೊಳ್ಳಲು ಬಳಸುದಾರಿಯಲ್ಲಿ ಅವರು ತೆರಳಲಿದ್ದಾರೆ.
ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಾದಿತ ನಡೆ ಅನುಸರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಸ್.ಪಿ. ಸೇರಿ ಐವರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.
ಯುವತಿ ಕುಟುಂಬದವರು ಭೇಟಿಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರಿಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಇವತ್ತು ಮತ್ತೊಮ್ಮೆ ಅವರು ಕುಟುಂಬದವರ ಭೇಟಿಗೆ ತೆರಳಲಿದ್ದಾರೆ.