ಔರಂಗಾಬಾದ್: ಮಕ್ಕಳು ಗಲಾಟೆ ಮಾಡಿದರೆ ಪೊಲೀಸರಿಗೆ ಕೊಡ್ತೇನೆ ಎಂದು ಹೆದರಿಸುವುದಿದೆ. ಆದರೆ, ಇಲ್ಲಿ ಪೊಲೀಸ್ ಠಾಣೆಯಲ್ಲೇ ಮಕ್ಕಳ ಕಲರವ ಕೇಳಿ ಬರುತ್ತಿದೆ. ಮಹಾರಾಷ್ಟ್ರದ ಔರಂಗಾಬಾದ್ ನ ಪೊಲೀಸ್ ಠಾಣೆಯೊಂದರಲ್ಲಿ ಕೊಳಚೆ ಪ್ರದೇಶದ ಮಕ್ಕಳಿಗಾಗಿ ಇಂಗ್ಲಿಷ್ ಪಾಠ ಪ್ರಾರಂಭಿಸಲಾಗಿದೆ.
ಸಮುದಾಯ ಪೊಲೀಸಿಂಗ್ ಕಾರ್ಯಕ್ರಮದ ಭಾಗವಾಗಿ ಔರಂಗಾಬಾದ್ ಪುಂಡಲೀಕ ನಗರ ಪೊಲೀಸ್ ಠಾಣೆಯಲ್ಲಿ ಇಂಗ್ಲಿಷ್ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳಲಾಗಿದೆ. ಸ್ಲಂ ಮಕ್ಕಳಿಗಾಗಿ 15 ದಿನದ ತರಗತಿ ಆಯೋಜಿಸಲಾಗಿದೆ.
ತರಗತಿಯಲ್ಲಿ ಹೈಸ್ಕೂಲ್ ಮಟ್ಟದ 14 ಮಕ್ಕಳು ಭಾಗವಹಿಸುತ್ತಿದ್ದಾರೆ. ಅದರಲ್ಲಿ 6 ಮಕ್ಕಳು ಆನ್ಲೈನ್ ತರಗತಿಯನ್ನೂ ಪಡೆದವರಲ್ಲ. “ಲಾಕ್ ಡೌನ್ ಕಾರಣದಿಂದ ಶಾಲೆಗಳು ಬಂದಾಗಿವೆ. ಹಲವು ಮಕ್ಕಳಿಗೆ ಆನ್ ಲೈನ್ ತರಗತಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದ ಈ ಯೋಚನೆ ಮಾಡಲಾಗಿದೆ” ಎಂದು ಪೊಲೀಸ್ ಇನ್ಸ್ ಪೆಕ್ಟರ್ ಘನಶ್ಯಾಮ ಸೋನಾವಾನೆ ಹೇಳಿದ್ದಾರೆ.