alex Certify ಪೊಲೀಸ್​ ಅಧಿಕಾರಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಅಧಿಕಾರಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್

ಪ್ರತಿಯೊಂದು ಊರನ್ನ ಕಾಯುವಂತಹ ಆರಕ್ಷಕರಿಗೇ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿವ ವೈರಲ್​ ಆಗುತ್ತಿರುವ ಈ ವಿಡಿಯೋ..!

ರಾಷ್ಟ್ರ ರಾಜಧಾನಿ ದೆಹಲಿ ಉತ್ತಮ್​ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಏಪ್ರಿಲ್​ 1ರಂದು ಈ ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಈ ವಿಡಿಯೋದಲ್ಲಿ ಇಬ್ಬರು ಪುರುಷರು ಸೋಫಾ ಮೇಲೆ ಕುಳಿತಿದ್ದ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಓರ್ವ ವ್ಯಕ್ತಿ ಪೊಲೀಸ್​ ಅಧಿಕಾರಿ ಕೆನ್ನೆಗೆ ಬಾರಿಸಿದ್ದು, ಇದಕ್ಕೆ ಪ್ರತಿಯಾಗಿ ಆ ಪೊಲೀಸ್,​ ಗುರೂಜಿ ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಪದೇ ಪದೇ ಹೇಳ್ತಿರೋದನ್ನ ಕಾಣಬಹುದಾಗಿದೆ.

ಅಲ್ಲೇ ಇದ್ದ ಪೊಲೀಸ್​ ಪೇದೆ ಈ ಹಲ್ಲೆಯನ್ನ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ವಿಡಿಯೋ ಸಂಬಂಧ ಸೂಕ್ತ ತನಿಖೆ ಮುಂದುವರಿದಿದೆ.

https://www.facebook.com/hindustantimes/videos/931540927604521/

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...