ಮುಂಬೈ: ವಿದೇಶಕ್ಕೆ ಪರಾರಿಯಾಗಿದ್ದ ನೀರವ್ ಮೋದಿಯ 1400 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿಗೆ ಕೋರ್ಟ್ ನಿಂದ ಆದೇಶ ನೀಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿ 2019 ರ ಮಾರ್ಚ್ 19 ರಿಂದ ಲಂಡನ್ ಕಾರಾಗೃಹದಲ್ಲಿದ್ದು, ವಿಚಾರಣೆಯನ್ನು 2020 ರ ಸೆಪ್ಟಂಬರ್ 7 ಕ್ಕೆ ಮುಂದೂಡಲಾಗಿದೆ.
ನೀರವ್ ಮೋದಿ ಹೊಂದಿರುವ 1400 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಲು ಮುಂಬೈನ ಪಿ.ಎಂ.ಎಲ್.ಎ. ಕೋರ್ಟ್ ಆದೇಶ ನೀಡಿದೆ. ಪ್ರಾಪರ್ಟಿಗಳ ಜೊತೆಗೆ ಸಂಬಂಧಿಸಿದಂತೆ ಕಾನೂನು ನೆರವು ಪಡೆದುಕೊಳ್ಳಲು 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. 2019 ರ ಡಿಸೆಂಬರ್ ನಲ್ಲಿ ನೀರವ್ ಮೋದಿ ತಲೆಮರೆಸಿಕೊಂಡ ಹಣಕಾಸು ಅಪರಾಧಿ ಎಂದು ಘೋಷಿಸಲಾಗಿದೆ.