ವೃದ್ಧೆಯೊಬ್ಬಳಿಗೆ ನೆರವಾಗುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣವನ್ನ ಮಧ್ಯದಲ್ಲೇ ನಿಲ್ಲಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ವೃದ್ದೆಗೆ ಪ್ರಥಮ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನ ಅರಿತ ಪ್ರಧಾನಿ ಮೋದಿ ತಮ್ಮ ಭಾಷಣದ ನಡುವೆಯೇ ವೃದ್ದೆಗೆ ಚಿಕಿತ್ಸೆ ನೀಡಿ ಎಂದು ಸೂಚನೆ ನೀಡಿದ್ದಾರೆ.
ವೇದಿಕೆಯ ಮೇಲೆ ನಿಂತಿದ್ದ ಪ್ರಧಾನಿ ಮೋದಿ ತಮ್ಮ ವೈದ್ಯ ತಂಡಕ್ಕೆ ವೃದ್ದೆಯನ್ನ ನೋಡಿ ಎಂದು ಹೇಳಿದ್ದಾರೆ. ನನ್ನ ಜೊತೆ ಯಾರು ವೈದ್ಯರಿದ್ದಿರೋ ಅವರು ಈ ತಾಯಿಯನ್ನ ನೋಡಿ, ಅವರಿಗೆ ನೀರನ್ನ ನೀಡಿ. ಅವರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ನನ್ನ ಜೊತೆ ಬಂದಿರುವ ವೈದ್ಯರ ತಂಡ ಕೂಡಲೇ ಮಹಿಳೆ ಬಳಿ ಹೋಗಿ ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ʼಮಾಸ್ಕ್ʼ ಜಾಗೃತಿಗಾಗಿ ವಿಶೇಷ ವಿಡಿಯೋ ಪೋಸ್ಟ್ ಮಾಡಿದ ಪುಣೆ ಪೊಲೀಸ್
ಕೂಚ್ ಬೆಹರ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ವೃದ್ಧ ಮಹಿಳೆ ನಿತ್ರಾಣಕ್ಕೆ ಒಳಗಾಗಿದ್ದರು. ಇದನ್ನ ಗಮನಿಸಿ ಪ್ರಧಾನಿ ಮೋದಿ ಭಾಷಣದ ನಡುವೆಯೇ ವೈದ್ಯ ತಂಡಕ್ಕೆ ಸೂಚನೆ ನೀಡಿದ್ದಾರೆ.
ಕಳೆದ ವಾರ ಅಸ್ಸಾಂನಲ್ಲಿ ಇಂತದ್ದೇ ಘಟನೆಯೊಂದು ವರದಿಯಾಗಿತ್ತು. ಅಲ್ಲೂ ಕೂಡ ಭಾಷಣದ ನಡುವೆಯೇ ವೃದ್ಧನ ಆರೋಗ್ಯ ತಪಾಸಣೆ ಮಾಡುವಂತೆ ತಮ್ಮ ವೈದ್ಯ ತಂಡಕ್ಕೆ ಪ್ರಧಾನಿ ಸೂಚನೆ ನೀಡಿದ್ದರು.