
ಪ್ರಧಾನ ಮಂತ್ರಿಯವರ ಕಾರ್ಯಾಲಯವನ್ನೇ ಮಾರಾಟಕ್ಕೆ ಇಟ್ಟಿದ್ದ ಮಹಾಕಳ್ಳರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಾರ್ಯಾಲಯವನ್ನು ಈ ಕಳ್ಳರು ಆನ್ಲೈನ್ನಲ್ಲಿ 7.5 ಕೋಟಿ ರೂ.ಗಳಿಗೆ ಮಾರಾಟಕ್ಕೆ ಇದೆ ಎಂದು ಘೋಷಿಸಿದ್ದರು.
ಒಎಲ್ಎಕ್ಸ್ ಜಾಲತಾಣದಲ್ಲಿ ಮೋದಿರ ವಾರಣಾಸಿ ಕಾರ್ಯಾಲಯದ ಚಿತ್ರ ತೆಗೆದು, ಈ ಜಾಗ ಮಾರಾಟಕ್ಕೆ ಇದೆ ಎಂದು ಆಪಾದಿತರು ಆನ್ಲೈನ್ನಲ್ಲಿ ಹಾಕಿಕೊಂಡಿದ್ದರು.
“ಪ್ರಧಾನಿ ಕಾರ್ಯಾಲಯದ ಚಿತ್ರ ಸೆರೆಹಿಡಿದ ವ್ಯಕ್ತಿಯೊಂದಿಗೆ ಮೂವರನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರ ಪೊಲೀಸರ ಗಮನಕ್ಕೆ ಬಂದ ಕೂಡಲೇ ಓಎಲ್ಎಕ್ಸ್ನಿಂದ ಈ ಜಾಹೀರಾತನ್ನು ಕಿತ್ತೊಗೆಯಲಾಗಿದೆ. ಪ್ರಕರಣ ಸಂಬಂಧ ಕೂಡಲೇ ಎಫ್ಐಆರ್ ಕೂಡಾ ದಾಖಲಾಗಿದೆ.