ಕೊರೊನಾ ವಿರುದ್ಧ ಹೋರಾಟ ಮುಂದುವರೆದಿದೆ.ಭಾರತದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಜನವರಿ 16ರಂದು ಬೆಳಿಗ್ಗೆ 11 ಗಂಟೆಗೆ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಜೊತೆಗೆ ಲಸಿಕೆಗಾಗಿ ತಯಾರಾಗಿರುವ ಕೋವಿನ್ ಅಪ್ಲಿಕೇಷನ್ ಗೆ ಚಾಲನೆ ನೀಡಲಿದ್ದಾರೆ.
ಸೀರಮ್ ಇನ್ಸ್ಸ್ಟಿಟ್ಯೂಟ್ ಜೊತೆ 1.1 ಕೋಟಿ ಡೋಸ್ ಗಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಹಾಗೆ ಭಾರತ್ ಬಯೋಟೆಕ್ ನ 55 ಲಕ್ಷ ಡೋಸ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ. ಆರರಿಂದ ಎಂಟು ತಿಂಗಳ ಸಮಯದಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆ ಹಾಕಲು ಸರ್ಕಾರ ಯೋಜನೆ ಸಿದ್ಧಪಡಿಸಿದೆ. ಮೂರು ಹಂತದಲ್ಲಿ ಕೊರೊನಾ ಲಸಿಕೆ ಹಾಕುವ ಕೆಲಸ ನಡೆಯಲಿದೆ. ಎರಡು ಡೋಸ್ ಮಧ್ಯೆ 28 ದಿನಗಳ ಅಂತರವಿರಲಿದೆ. ಡೋಸ್ ಹಾಕಿದ 14 ದಿನಗಳ ನಂತ್ರ ಅದ್ರ ಪರಿಣಾಮ ನೋಡಬಹುದಾಗಿದೆ.
ಕೊರೊನಾ ಲಸಿಕೆ ಬಗ್ಗೆ ಸಂಪೂರ್ಣ ಮಾಹಿತಿ ಕೋವಿನ್ ಅಪ್ಲಿಕೇಷನ್ ನಲ್ಲಿ ಸಿಗಲಿದೆ. ಇದ್ರಲ್ಲಿಯೇ ಜನರು ಹೆಸರು ನೋಂದಾಯಿಸಿಕೊಳ್ಳಬಹುದು. ಕೊರೊನಾ ಲಸಿಕೆಯನ್ನು ಜನರಿಗೆ ತಲುಪಿಸಲು ಈ ಅಪ್ಲಿಕೇಷನ್ ಸಿದ್ಧಪಡಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಷನ್ ಲಭ್ಯವಿದೆ. 12 ಭಾಷೆಗಳಲ್ಲಿ ಎಸ್ಎಂಎಸ್ ಲಭ್ಯವಾಗಲಿದೆ. ಅಪ್ಲಿಕೇಷನ್ ನಲ್ಲಿ ಹೆಸರು ನೋಂದಾಯಿಸಿದ ನಂತ್ರ ಎಂದು ನಿಮಗೆ ಲಸಿಕೆ ಸಿಗಲಿದೆ ಎಂಬ ಬಗ್ಗೆಯೂ ನಿಮಗೆ ಮಾಹಿತಿ ಸಿಗಲಿದೆ.