ಗಣರಾಜ್ಯೋತ್ಸವ ದಿನದಂದು ರಾಜವಂಶಕ್ಕೆ ಸೇರಿದ ಪೇಟ ಧರಿಸಿದ ಪ್ರಧಾನಿ 26-01-2021 2:08PM IST / No Comments / Posted In: Latest News, India ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಪೇಟವನ್ನ ಧರಿಸುವ ಸಂಪ್ರದಾಯವನ್ನ ಇಟ್ಟುಕೊಂಡಿದ್ದಾರೆ. ಈ ಬಾರಿ ಕೂಡ ತಮ್ಮ ಈ ಸಂಪ್ರದಾಯವನ್ನ ಪ್ರಧಾನಿ ಮೋದಿ ಮುಂದುವರಿಸಿಕೊಂಡು ಹೋಗಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಗುಜರಾತ್ನ ಜಮ್ನಾಗರ್ ರಾಜವಂಶಸ್ಥರು ಉಡುಗೊರೆಯಾಗಿ ನೀಡಿರುವ ಪಗಡಿಯನ್ನ ತೊಟ್ಟು ಗಮನ ಸೆಳೆದಿದ್ದಾರೆ. ಕಂದು ಬಣ್ಣದ ಪೇಟ, ಬೂದು ಬಣ್ಣದ ಜಾಕೆಟ್ ಹಾಗೂ ಕ್ರೀಂ ಬಣ್ಣದ ಶಾಲನ್ನ ಹೊದ್ದಿದ್ದ ಪ್ರಧಾನಿ ಮೋದಿ 72ನೇ ಗಣರಾಜ್ಯೋತ್ಸವ ದಿನಕ್ಕೆ ಸಾಕ್ಷಿಯಾದರು. ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ವೇಳೆ ಪ್ರಧಾನಿ ಮೋದಿ ಪಗಡಿ ತೊಟ್ಟಿರೋದನ್ನ ಗುರುತಿಸಲಾಯ್ತು. Prime Minister Modi is wearing a special 'Paghdi' from Jamnagar, today. The first such 'Paghdi' was gifted to the PM by the royal family of Jamnagar, Gujarat. pic.twitter.com/7wRITqsC52 — ANI (@ANI) January 26, 2021