ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ದೇಶದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾಹಿತಿ ನೀಡಿದ್ದಾರೆ. ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ಸಮಾವೇಶದಲ್ಲಿ ಪಿಎಂ ಮೋದಿ ಇದ್ರ ಬಗ್ಗೆ ಮಾತನಾಡಿದ್ದಾರೆ. ಮೂರು – ನಾಲ್ಕು ವರ್ಷಗಳ ಸುದೀರ್ಘ ಚರ್ಚೆ ನಂತ್ರ ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಪ್ರತಿಯೊಬ್ಬರು ಇದ್ರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ನೀತಿಯನ್ನು ಯಾರೂ ವಿರೋಧಿಸುತ್ತಿಲ್ಲ, ಯಾಕೆಂದ್ರೆ ಅದರಲ್ಲಿ ಏಕಪಕ್ಷೀಯತೆಯಿಲ್ಲ. ಇಷ್ಟು ದೊಡ್ಡ ಬದಲಾವಣೆಯನ್ನು ಜಾರಿಗೆ ತರುವುದು ಹೇಗೆ ಎಂಬುದು ಎಲ್ಲರ ಪ್ರಶ್ನೆ. ಶೀಘ್ರದಲ್ಲಿಯೇ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಇದ್ರ ಜಾರಿಗೆ ತರಲು ಬೇಕಾದ ಎಲ್ಲ ಸಹಾಯವನ್ನು ನಾನು ಮಾಡಬಲ್ಲೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಐದನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಮಾತೃಭಾಷೆಯಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಈ ನೀತಿಯು ಹೊಸ ಭಾರತಕ್ಕೆ ಅಡಿಪಾಯ ಹಾಕಲಿದೆ. ಭಾರತವನ್ನು ಸದೃಢವಾಗಿಸಲು, ನಾಗರಿಕರನ್ನು ಸಬಲೀಕರಣಗೊಳಿಸಲು ಉತ್ತಮ ಶಿಕ್ಷಣ ಅಗತ್ಯ ಎಂದು ಪ್ರಧಾನಿ ಹೇಳಿದ್ದಾರೆ.
ಇಂದು ನರ್ಸರಿ ಮಗು ಹೊಸ ತಂತ್ರಜ್ಞಾನದ ಬಗ್ಗೆ ಓದಿದಾಗ, ಭವಿಷ್ಯಕ್ಕಾಗಿ ತಯಾರಿ ಮಾಡುವುದು ಸುಲಭವಾಗುತ್ತದೆ. ಶಿಕ್ಷಣ ನೀತಿಯು ಹಲವು ದಶಕಗಳಿಂದ ಬದಲಾಗಿಲ್ಲ. ಕೆಲವೊಮ್ಮೆ ವೈದ್ಯ-ಎಂಜಿನಿಯರ್-ವಕೀಲರನ್ನಾಗಿ ಮಾಡುವ ಸ್ಪರ್ಧೆ ಇತ್ತು. ಆದ್ರೆ ಇನ್ಮುಂದೆ ಯುವಜನರು ಸೃಜನಶೀಲ ವಿಚಾರಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ. ಈಗ ಅಧ್ಯಯನಗಳು ಮಾತ್ರವಲ್ಲದೆ ಕೆಲಸದ ಸಂಸ್ಕೃತಿಯನ್ನೂ ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.