ಶ್ರಾವಣ ಮಾಸದ ಹಬ್ಬಗಳಲ್ಲಿ ರಾಖಿ ಹಬ್ಬ ಕೂಡ ಮಹತ್ವದ್ದು. ಭಾರತದಲ್ಲಿ ಬಹಳ ಸಡಗರ ಸಂಭ್ರಮದಿಂದ ರಾಖಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅಣ್ಣ-ತಂಗಿಯ ಸೋದರತ್ವ ಭಾವ ಹೆಚ್ಚಿಸುವ ಈ ಪವಿತ್ರ ರಾಖಿ ಹಬ್ಬಕ್ಕೆ ಇನ್ನೇನು ಎರಡು ದಿನ ಮಾತ್ರ ಬಾಕಿ ಇದೆ. ಈ ರಾಖಿ ಹಬ್ಬದ ಪ್ರಯುಕ್ತ ನರೇಂದ್ರ ಮೋದಿಯವರಿಗೆ ಪಾಕಿಸ್ತಾನಿ ಮೂಲದ ಸಹೋದರಿಯೊಬ್ಬರು ರಾಖಿ ಕಳುಹಿಸಿದ್ದಾರೆ.
ಹೌದು, ಕಳೆದ 25 ವರ್ಷಗಳಿಂದ ನರೇಂದ್ರ ಮೋದಿಗೆ ರಾಖಿ ಕಟ್ಟುತ್ತಿರುವ ಖಮರ್ ಮೊಹ್ಸಿನ್ ಶೇಖ್ ಅವರು ಈ ವರ್ಷ ಕೂಡ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿಸಿದ್ದಾರೆ. ಮೂಲತಃ ಪಾಕಿಸ್ತಾನರವರಾದ ಇವರು ಗುಜರಾತ್‌ನ ಅಹಮದಾಬಾದ್ ನಲ್ಲೇ ನೆಲೆಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ರಾಖಿ ಕಟ್ಟಬೇಕಿತ್ತು. ಆದರೆ ಈ ವರ್ಷ ಕೊರೊನಾದಿಂದಾಗಿ ದೆಹಲಿಗೆ ಹೋಗಲು ಸಾಧ್ಯವಾಗದ ಕಾರಣ ಅಂಚೆ ಮೂಲಕ ರಾಖಿಯನ್ನು ಕಳುಹಿಸಿದ್ದಾರೆ.
ಪ್ರತಿ ವರ್ಷ ಕೂಡ ನಾನು ಅವರಿಗೆ ರಾಖಿ ಕಟ್ಟುತ್ತೇನೆ. ಈ ವರ್ಷ ಕೂಡ ರಾಖಿ ಕಳುಹಿಸಿದ್ದೇನೆ. ನನಗೆ ಸಹೋದರರಿಲ್ಲ. ಅವರೇ ನನ್ನ ಸಹೋದರ, ಅವರಿಗೆ ಒಳ್ಳೆದಾಗಲಿ ಎಂದು ಹರಸಿದ್ದಾರೆ. ಮೋದಿಯವರಿಗೂ ಈ ಸಹೋದರಿ ಖಮರ್ ಮೊಹ್ಸಿನ್ ಶೇಖ್ ಎಂದರೆ ಅಚ್ಚುಮೆಚ್ಚು.