ಪ್ರಧಾನಿ ನರೇಂದ್ರ ಮೋದಿ ತಮ್ಮ ವೇಷ ಭೂಷಣದ ಮೂಲಕವೇ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡೋ ನಾಯಕ. ಅದರಲ್ಲೂ ನಿರ್ದಿಷ್ಟ ಪ್ರದೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಆ ಪ್ರದೇಶ ಸಾಂಪ್ರದಾಯಿಕ ಉಡುಗೆಯನ್ನೇ ಧರಿಸುತ್ತಾರೆ.
ಇಂದು ಜಮ್ಮು ಕಾಶ್ಮೀರದ ಜನತೆಗೆ ಆಯುಷ್ಮಾನ್ ಭಾರತ್ ಯೋಜನೆ ಪ್ರಾರಂಭಿಸುವ ಕಾರ್ಯಕ್ರಮದ ವೇಳೆ ಕಾಶ್ಮೀರದ ಸಂಪ್ರದಾಯ ಉಡುಗೆ ಫೆರನ್ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
ಈ ಉಡುಗೆಯನ್ನ ಕಳೆದ ವರ್ಷ ಚಳಿಗಾಲದ ಸಂದರ್ಭದಲ್ಲಿ ಜಮ್ಮು ಹಾಗೂ ಕಾಶ್ಮೀರದ ಕೃಷಿ ಕಾರ್ಮಿಕರಿಂದ ಮೋದಿ ಉಡುಗೊರೆಯಾಗಿ ಪಡೆದಿದ್ದರು. ಈ ಉಡುಪನ್ನ ಪ್ರಧಾನಿ ಮೋದಿ ಕಣಿವೆ ರಾಜ್ಯಕ್ಕೆ ಭೇಟಿ ನೀಡುವ ವೇಳೆ ಧರಿಸುವ ಇರಾದೆ ಹೊಂದಿದ್ದರಂತೆ. ಆದರೆ ಕೊರೊನಾದಿಂದಾಗಿ ಪ್ರಧಾನಿ ಸದ್ಯ ಯಾವುದೇ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಇಂದಿನ ಕಾರ್ಯಕ್ರಮವು ಕಣಿವೆ ರಾಜ್ಯಕ್ಕೆ ಸೀಮಿತವಾಗಿದ್ದರಿಂದ ಮೋದಿ ಈ ವಿಶೇಷ ಉಡುಪನ್ನ ಧರಿಸಿದ್ದಾರೆ.