ದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಕರ್ನಾಟಕ, ಬಿಹಾರ, ತಮಿಳುನಾಡು, ಅಸ್ಸಾಂ, ಚಂಡೀಗಢ, ಉತ್ತರಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿ ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಭೆ ನಡೆಸಿದ್ರು. ಡಿಸಿಗಳ ಜೊತೆ ಮಹತ್ವದ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಕೊರೊನಾ ನಿಯಂತ್ರಣದ ಮಾಡುವ ಬಗ್ಗೆ ಪ್ರಮುಖ ಸಲಹೆ ನೀಡಿದ್ದಾರೆ.
ಸಭೆ ಮುಗಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಡಿಸಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಡಿಸಿಗಳೇ ಕೊರೊನಾ ವೈರಸ್ ವಿರುದ್ಧದ ಯುದ್ಧದ ಕಮಾಂಡರ್ ಆಗಿದ್ದಾರೆ. ಫೀಲ್ಡ್ ಕಮಾಂಡರ್ನಂತೆ ನೀವು ಇಡೀ ಜಿಲ್ಲೆಯನ್ನ ಸಶಸ್ತ್ರೀಕರಣ ಮಾಡಬೇಕಿದೆ. ನಿಮ್ಮ ಸ್ಪೂರ್ತಿಯಿಂದ ಕೊರೊನಾ ವಾರಿಯರ್ಸ್ಗೆ ಆತ್ಮಸ್ಥೈರ್ಯ ಹೆಚ್ಚಲಿದೆ. ನಿಮ್ಮ ಜಿಲ್ಲೆಯ ಸವಾಲುಗಳನ್ನ ನೀವು ಎದುರಿಸಿದ್ದೀರಾ. ಜಿಲ್ಲೆಗಳು ಕೊರೊನಾವನ್ನ ಗೆದ್ದರೆ ಇಡೀ ದೇಶವೇ ಕೊರೊನಾ ಗೆದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತವಾಗುವಂತೆ ಮಾಡಬೇಕು ಎಂಬ ಸಂಕಲ್ಪ ಮಾಡಿ. ಕಾಳಸಂತೆಯಲ್ಲಿ ಔಷಧ ಮಾರಾಟವಾಗ್ತಿರೋದ್ರ ಬಗ್ಗೆ ಸೂಕ್ತ ಕ್ರಮಗಳನ್ನ ಕೈಗೊಳ್ಳಿ. ನಿಮ್ಮ ಜಿಲ್ಲೆಯಲ್ಲಿ ನೀವು ಕೈಗೊಳ್ಳುವ ಕ್ರಮ ಇತರರಿಗೆ ಮಾದರಿಯಾಗಲಿ. ದೇಶದಲ್ಲಿ ಕೆಲವೆಡೆ ಕೊರೊನಾ ಕಡಿಮೆಯಾಗಿದೆ. ಆದರೆ ಕೆಲವೆಡೆ ಸೋಂಕಿನ ಪ್ರಮಾಣ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ರು.
ಪ್ರತಿಯೊಂದು ಜೀವವನ್ನೂ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿಯಾಗಿದೆ. ಕೊರೊನಾ ನಿಯಂತ್ರಣದಲ್ಲಿ ಸರ್ಕಾರಿ ಅಧಿಕಾರಿಗಳಷ್ಟೇ ಜನಪ್ರತಿನಿಧಿಗಳ ಪಾತ್ರವೂ ಮುಖ್ಯವಾಗಿದೆ. 3 ಟಿ, ಐಸೋಲೇಷನ್, ಕ್ವಾರಂಟೈನ್ ಪ್ರಮಾಣವನ್ನ ಹೆಚ್ಚು ಮಾಡಿ. ಕೊರೊನಾ ತಡೆಗಾಗಿ ನೀವೆಲ್ಲ ಸ್ವತಂತ್ರ ಕೆಲಸ ಮಾಡಬೇಕಿದೆ. ಕೋವಿಡ್ ಹೊರತುಪಡಿಸಿ ಪ್ರತಿಯೊಬ್ಬರ ಜೀವನ ನಿರ್ವಹಣೆ ಬಗ್ಗೆಯೂ ಗಮನ ಹರಿಸಿ. ಲಾಕ್ಡೌನ್ ಬಗ್ಗೆ ಡಿಸಿಗಳು ನಿರ್ಧಾರ ಕೈಗೊಳ್ಳಿ. ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತವಾಗಬೇಕು ಎಂಬ ಶಪಥ ಮಾಡಿ. ಇದಕ್ಕೆ ಸೂಕ್ತ ಎನ್ನಿಸುವ ಕ್ರಮವನ್ನ ಡಿಸಿಗಳು ಕೈಗೊಳ್ಳಲಿ ಎಂದು ಹೇಳಿದ್ರು.