ಕೊರೊನಾ ವಿರುದ್ಧದ ಹೋರಾಟ ಶುರುವಾಗಲಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ನಂತ್ರ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಜಾಗೃತಿ ಮೂಡಿಸಬೇಕೆಂದಿದ್ದಾರೆ. ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗುವುದು. ಮುಂಚೂಣಿ ಕಾರ್ಮಿಕರ ಲಸಿಕೆ ವೆಚ್ಚವನ್ನು ಸರ್ಕಾರ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.
ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನದ ಬಗ್ಗೆ ಚರ್ಚೆ ನಡೆದಿದೆ. ರಾಜ್ಯಗಳಿಂದ ಉತ್ತಮ ಸಲಹೆಗಳನ್ನು ಸ್ವೀಕರಿಸಲಾಗಿದೆ. ಕೊರೊನಾ ವಿರುದ್ಧ ಹೋರಾಡಲು ಈ ಮಾತುಕತೆ ಮಹತ್ವದ ಪಾತ್ರ ವಹಿಸಲಿದೆ ಎಂದು ಮೋದಿ ಹೇಳಿದ್ದಾರೆ.
ರಾಜ್ಯಗಳ ಆಡಳಿತವನ್ನು ಹೊಗಳಿದ ಮೋದಿ ಕೊರೊನಾ ವಿರುದ್ಧ ಹಗಲು-ರಾತ್ರಿ ಕೆಲಸ ಮಾಡಿದ್ದಾರೆ ಎಂದ್ರು. ದೇಶದಲ್ಲಿ ಎರಡು ಕೋಟಿ ಲಸಿಕೆ ತಯಾರಿಸಲಾಗಿದೆ. ಎರಡು ಲಸಿಕೆಯನ್ನು ಭಾರತದಲ್ಲಿಯೇ ತಯಾರಿಸಿರುವುದು ಹೆಮ್ಮೆ ಸಂಗತಿ ಎಂದು ಮೋದಿ ಹೇಳಿದ್ದಾರೆ.