ದೇಶದ ರೈತರಿಗ ಖುಷಿ ಸುದ್ದಿ ಸಿಕ್ಕಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8 ನೇ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ. ಪಿಎಂ ಮೋದಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೈತರಿಗೆ ಕಂತು ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರೈತರೊಂದಿಗೆ ಸಂವಾದ ನಡೆಸಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಬಿಡುಗಡೆಯಾಗ್ತಿದ್ದಂತೆ ರೈತರಿಗೆ ಹಣ ಸಿಗಲು ಶುರುವಾಗಿದೆ. ಇಂದಿನಿಂದ ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ 2000 ರೂಪಾಯಿ ಜಮಾ ಆಗಲಿದೆ. ಈವರೆಗೆ ರೈತರಿಗೆ 7 ಕಂತುಗಳಲ್ಲಿ 2000 ರೂಪಾಯಿಯಂತೆ ಹಣ ಹಾಕಲಾಗಿದೆ. ಇಂದು ಅದರ 8 ನೇ ಕಂತು ಬಿಡುಗಡೆಯಾಗಿದೆ.
ರೈತರು ತಮ್ಮ ಖಾತೆಗೆ ಹಣ ಬಂದಿದೆಯೇ ಎಂಬುದನ್ನು pmkisan.gov.in ನಲ್ಲಿ ಚೆಕ್ ಮಾಡಬಹುದು. ಇಲ್ಲಿನ ಮುಖಪುಟದಲ್ಲಿ ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತ್ರ ಫಲಾನುಭವಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅದರ ನಂತರ ಹೊಸ ಪುಟ ತೆರೆಯುತ್ತದೆ. ಅಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅದ್ರಲ್ಲಿ ನಿಮ್ಮ ಖಾತೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.