
ಕೆಲ ವರದಿಗಳ ಪ್ರಕಾರ ಮೋದಿ ಈ ಬಾರಿ ಗುಜರಾತ್ನಲ್ಲಿ ದೀಪಾವಳಿ ಆಚರಿಸ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಕೆಲ ವರದಿಗಳು ಪ್ರಧಾನಿ ಈ ಬಾರಿ ರಾಜಸ್ಥಾನದ ಜೈಸಲ್ಮೇರ್ನಲ್ಲಿ ಬೆಳಕಿನ ಹಬ್ಬ ಆಚರಿಸ್ತಾರೆ ಎನ್ನಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ಬಾರಿ ನಮ್ಮನ್ನ ರಕ್ಷಿಸುತ್ತಿರುವ ಭಾರತೀಯ ಯೋಧರಿಗಾಗಿ ದೀಪ ಬೆಳಗೋಣ. ದೇಶಕ್ಕಾಗಿ ಹೋರಾಡುತ್ತಿರುವ ಭಾರತೀಯ ಯೋಧರನ್ನ ಹೊಗಳಲು ನನಗೆ ಪದಗಳು ಸಾಲುತ್ತಿಲ್ಲ. ಯೋಧರ ಕುಟುಂಬಕ್ಕೂ ನಾವು ಕೃತಜ್ಞತೆ ಸಲ್ಲಿಸೋಣ ಎಂದು ಬರೆದುಕೊಂಡಿದ್ದಾರೆ.