ಜಮ್ಮು ಮತ್ತು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ವಿಮೆ ವ್ಯಾಪ್ತಿಯನ್ನ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆಯುಷ್ಮಾನ್ ಭಾರತ್ ಯೋಜನೆಯನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಾರಂಭಿಸಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಇಷ್ಟು ದಿನ ವಂಚಿತರಾಗಿದ್ದ ಕಣಿವೆ ರಾಜ್ಯದ ಜನತೆ ಕೂಡ ಇನ್ಮುಂದೆ ಆರೋಗ್ಯ ವಿಮೆ ವ್ಯಾಪ್ತಿಗೆ ಬರಲಿದ್ದಾರೆ.
ಈ ಯೋಜನೆಯು ಸಾರ್ವತ್ರಿಕ ಆರೋಗ್ಯದ ರಕ್ಷಣೆಯನ್ನು ಒದಗಿಸುತ್ತೆ. ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳೂ ಸಹ ಈ ಯೋಜನೆಯ ಅಡಿಯಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನ ಪಡೆಯಬಹುದಾಗಿದೆ.
ಯೋಜನೆ ಉದ್ಘಾಟನೆ ವೇಳೆ ಪ್ರಧಾನಿ ಮೋದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೆ. ಗವರ್ನರ್ ಮನೋಜ್ ಸಿನ್ಹಾ ಸಾಥ್ ನೀಡಿದರು.
ಈ ಯೋಜನೆಯು ಜಮ್ಮು ಹಾಗೂ ಕಾಶ್ಮೀರದ ಎಲ್ಲ ನಿವಾಸಿಗಳಿಗೆ ಉಚಿತ ವಿಮಾ ರಕ್ಷಣೆ ಒದಗಿಸಲಿದೆ. ಈ ಯೋಜನೆ ಫಲಾನುಭವಿಗಳಿಗೆ 5 ಲಕ್ಷ ರೂಪಾಯಿಯವರೆಗೆ ಕ್ಯಾಶ್ ಲೆಸ್ ಆರೋಗ್ಯ ರಕ್ಷಣೆ ಸಿಗಲಿದೆ. ಕಣಿವೆ ರಾಜ್ಯದ 15 ಲಕ್ಷ ನಿವಾಸಿಗಳು ಇನ್ಮುಂದೆ ಈ ಯೋಜನೆ ಲಾಭ ಪಡೆಯಲಿದ್ದಾರೆ.