
ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಮೂರು ಸಲ ಪ್ರಧಾನಿಯಾಗಿ ಆರು ವರ್ಷ 78 ದಿನ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಮೋದಿ ಆರು ವರ್ಷ 79 ದಿನ ಆಡಳಿತ ನಡೆಸಿದ್ದು ವಾಜಪೇಯಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
2014ರ ಮೇ 26 ರಂದು ಭಾರತದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು 2019ರ ಮೇ 30ರಂದು ಎರಡನೇ ಸಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಸುದೀರ್ಘ ಅವಧಿಗೆ ಪ್ರಧಾನಿಯಾದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿ ನರೇಂದ್ರ ಮೋದಿಯಾಗಿದ್ದಾರೆ.
ಜವಾಹರಲಾಲ್ ನೆಹರು 6126, ಇಂದಿರಾಗಾಂಧಿ 5825, ಮನಮೋಹನ್ ಸಿಂಗ್ 3654, ನರೇಂದ್ರ ಮೋದಿ 2269, ವಾಜಪೇಯಿ 2268 ದಿನ ಆಡಳಿತ ನಡೆಸಿದ್ದಾರೆ.