ನವದೆಹಲಿ: ಗಲ್ವಾನ್ ಕಣಿವೆ ಸಂಘರ್ಷದ ನಂತರದಲ್ಲಿ ಚೀನಾಕ್ಕೆ ಒಂದೊಂದಾಗಿ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.
ಚೀನಾಗೆ ಆರ್ಥಿಕವಾಗಿ ಬಹು ದೊಡ್ಡ ಪೆಟ್ಟು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಆಟಿಕೆ ತಯಾರಿಕೆ ವಲಯಕ್ಕೆ ಹೆಚ್ಚು ಉತ್ತೇಜನ ನೀಡಲು ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದು ತಂತ್ರಜ್ಞಾನ ಬಳಸಿಕೊಂಡು ಭಾರತದ ಸಂಪ್ರದಾಯಕ ಆಟಿಕೆಗಳನ್ನು ಆಧುನಿಕವಾಗಿ ತಯಾರಿಸುವ ಕುರಿತಾಗಿ ಮೋದಿ ಸಮಾಲೋಚನೆ ನಡೆಸಿದ್ದಾರೆ.
ಭಾರತೀಯ ಗೊಂಬೆಗಳು ಮತ್ತು ಆಟಿಕೆಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಕುರಿತಾಗಿ ಚರ್ಚೆ ನಡೆಸಲಾಗಿದೆ. ಈ ಮೂಲಕ ಚೀನಾ ಆರ್ಥಿಕತೆಗೆ ದೊಡ್ಡ ಏಟು ನೀಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.