ರಸಗುಲ್ಲಾ ಸವಿದಿರುತ್ತೀರಿ, ಬಿರ್ಯಾನಿ ಚಪ್ಪರಿಸುತ್ತೀರಿ. ಆದರೆ ‘ಅಂಗೂರಿ ರಸಗುಲ್ಲಾ ಬಿರಿಯಾನಿ’ ಟೇಸ್ಟ್ ಮಾಡಿದ್ದೀರಾ? ಇಲ್ಲೊಬ್ಬ ಫುಡ್ ಬ್ಲಾಗರ್ ಈತರದ್ದೊಂದು ಹುಚ್ಚು ಸಾಹಸ ಮಾಡಿ ನೆಟ್ಟಿಗರಿಂದ ಬೈಸಿಕೊಂಡಿದ್ದಾರೆ.
ಕಿವಿ – ಪಿಜ್ಜಾ, ಐಸ್ ಕ್ರೀಮ್ -ವಡಾ ಪಾವ್, ಚಾಕೊಲೇಟ್ -ಮ್ಯಾಗಿ, ಗುಲಾಬ್ ಜಾಮುನ್ – ಕೇಕ್ ಮತ್ತು ಮ್ಯಾಗಿ – ಪಾನಿ ಪುರಿ ಈ ರೀತಿ ಹೊಂದಿಕೆಯಾಗದ ಆಹಾರಗಳ ಕಾಂಬೋಗಳನ್ನು ಸಿದ್ದಮಾಡಿ ವಿಡಿಯೋ ಪೋಸ್ಟ್ ಮಾಡುವ ಕೆಲಸ ಹಲವು ವರ್ಷಗಳಿಂದ ನಡೆದಿದೆ. ಈ ಸಾಲಿಗೆ ರಸಗುಲ್ಲಾ- ಬಿರಿಯಾನಿ ಮಿಕ್ಸ್ ಮಾಡಿದ ವಿಡಿಯೋ ಹೊಸದಾಗಿ ಸೇರಿಕೊಂಡಿದ್ದು ವೈರಲ್ ಆಗಿದೆ.
ಈ ವಿಡಿಯೋ ನೋಡಿ ನೆಟ್ಟಿಗರು ಅಸಹ್ಯ ವ್ಯಕ್ತಪಡಿಸಿದ್ದಾರೆ. ವಿಡಿಯೋದ ಪ್ರಾರಂಭದಲ್ಲಿ, ಬಿರಿಯಾನಿ ತೋರಿಸುವ ಆಕೆ ಬಳಿಕ ಬಿರಿಯಾನಿ ನಡುವೆ ರಸಗುಲ್ಲಾವನ್ನು ಎತ್ತಿ ತೋರಿಸುತ್ತಾರೆ. ಕೆಲವು ನೆಟಿಜನ್‌ಗಳು ಈ ಕಾಂಬೊ ಆಸಕ್ತಿದಾಯಕವಾಗಿದೆ ಎಂದು ಹೇಳಿದರೆ, ಬಿರಿಯಾನಿಯಲ್ಲಿ ರಸಗುಲ್ಲಾ ಇರುವುದರಿಂದ ಅನೇಕರು ನಯವಾಗಿ ತಿರಸ್ಕರಿಸಿ ಅಸಹ್ಯ ವ್ಯಕ್ತಪಡಿಸಿದ್ದಾರೆ. “ಇದರಿಂದ ಇಡೀ ಮೊಘಲ್ ರಾಜವಂಶ, ಲಖನೌ ನವಾಬರು, ಹೈದರಾಬಾದ್‌ನ ನಿಜಾಮರು ಮನನೊಂದಿದ್ದಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
https://www.facebook.com/510159809093566/videos/836986677074542