ಕೋವಿಡ್ 19 ವೈರಸ್ನ್ನು ನಿಯಂತ್ರಿಸುವ ಸಲುವಾಗಿ ಜನಸಂದಣಿ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಮುಂಬರುವ ಬೇಸಿಗೆಯಿಂದ ಮುಂಬೈ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ರೈಲು ಫ್ಲಾಟ್ಫಾರ್ಮ್ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ನಿಲ್ದಾಣ, ದಾದರ್ ಹಾಗೂ ಲೋಕಮಾನ್ಯ ತಿಲಕ್ ನಿಲ್ದಾಣ ಮತ್ತು ಸಮೀಪದ ಥಾಣೆ, ಕಲ್ಯಾಣ್, ಪನ್ವೆಲ್ , ಭಿವಾಂಡಿ ಸ್ಟೇಷನ್ಗಳ ಫ್ಲಾಟ್ಫಾರಂ ದರ ಹೆಚ್ಚಾಗಿದೆ. ಈ ಹಿಂದೆ 10 ರೂಪಾಯಿ ಇದ್ದ ದರ 50 ರೂಪಾಯಿಗೆ ಏರಿಕೆಯಾಗಿದೆ.
ಮಾರ್ಚ್ 1ರಿಂದ ಈ ಬೆಲೆ ಏರಿಕೆ ಜಾರಿಯಾಗಿದ್ದು ಜೂನ್ 15ರವರೆಗೂ ಈ ಬೆಲೆ ಇರಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಬೇಸಿಗೆ ಕಾಲದಲ್ಲಿ ಜನಸಂದಣಿಯನ್ನ ತಪ್ಪಿಸಬೇಕು ಹಾಗೂ ಇದರಿಂದ ಕೊರೊನಾ ವೈರಸ್ ನಿಯಂತ್ರಣದಲ್ಲಿ ಇರಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.