ಕೊರೋನಾ ತೀವ್ರವಾಗಿ ಬಾಧಿಸುವ ರೋಗಿಗಳಿಗೆ ಮತ್ತು ಕೊರೊನಾ ಮರಣ ಪ್ರಮಾಣ ತಪ್ಪಿಸಲು ಕನ್ವಲ್ಸೆಂಟ್ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ಇದು ಪರಿಣಾಮಕಾರಿಯಾಗಿಲ್ಲವೆಂಬುದು ಸಾಬೀತಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ.
ಕೋವಿಡ್ -19 ರೋಗಿಗಳ ಮೇಲೆ ಕನ್ವಲ್ಸೆಂಟ್ ಪ್ಲಾಸ್ಮಾ ಚಿಕಿತ್ಸೆಯ ಪರಿಣಾಮವನ್ನು ಸಂಶೋಧನೆ ಮಾಡಲು ಏಪ್ರಿಲ್ 22 ರಿಂದ ಜುಲೈ 14 ರವರೆಗೆ 39 ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಎಲ್‌ಸಿಐಡಿ ಪ್ರಯೋಗ ನಡೆಸಲಾಯ್ತು. ಸಿಪಿ ಚಿಕಿತ್ಸೆಯಲ್ಲಿ ಕೋವಿಡ್ -19 ರಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಿಂದ ಪ್ರತಿಕಾಯಗಳನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಸೋಂಕಿತ ವ್ಯಕ್ತಿಗೆ ವರ್ಗಾಯಿಸುತ್ತದೆ. ಇದರಿಂದಾಗಿ ಅವನ ದೇಹವು ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಒಟ್ಟು 464 ರೋಗಿಗಳ ಅಧ್ಯಯನ ಮಾಡಲಾಗಿದೆ.
ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಕೋವಿಡ್ -19 ರ ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಪಿ ವಿಶೇಷವಾಗಿ ಪರಿಣಾಮಕಾರಿಯಾಗಿಲ್ಲ ಎಂದು ಅಧ್ಯಯನ ಹೇಳಿದೆ. ಅಧ್ಯಯನದ ಪ್ರಕಾರ, ಕೋವಿಡ್ -19 ಗಾಗಿ ಸಿಪಿ ಬಳಕೆಯ ಬಗ್ಗೆ ಕೇವಲ ಎರಡು ಪ್ರಯೋಗಗಳನ್ನು ಪ್ರಕಟಿಸಲಾಗಿದೆ. ಒಂದು ಚೀನಾದಿಂದ ಮತ್ತು ಇನ್ನೊಂದು ನೆದರ್‌ಲ್ಯಾಂಡ್‌ನಿಂದ. ಈಗ ಎರಡೂ ದೇಶಗಳಲ್ಲಿ ಇದನ್ನು ನಿಲ್ಲಿಸಲಾಗಿದೆ.