ಮಾಂಜಾವೊಂದಕ್ಕೆ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಲು ಉತ್ತರ ಪ್ರದೇಶದ ಬರೇಲಿ ಪೊಲೀಸರು ಕ್ರೇನ್ ತರಿಸಿದ್ದು, ಈ ಘಟನೆಯ ವಿಡಿಯೋ ಈಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
ಎರಡು ಮರಗಳ ನಡುವೆ ಇದ್ದ ಮಾಂಜಾಗೆ ಸಿಲುಕಿಕೊಂಡಿದ್ದ ಪಾರಿವಾಳವು ಒಂದು ಗಂಟೆಯ ಮಟ್ಟಿಗೆ 70 ಅಡಿ ಎತ್ತರದಲ್ಲಿ ಸಿಲುಕಿ ಹಾಕಿಕೊಂಡಿತ್ತು. ಇದನ್ನು ಕಂಡ ಪೊಲೀಸರು ಅದನ್ನು ರಕ್ಷಿಸಲು ಕ್ರೇನ್ ಒಂದನ್ನು ತಂದಿದ್ದಾರೆ. ರೆಕ್ಕೆಗೆ ಪೆಟ್ಟು ಮಾಡಿಕೊಂಡಿದ್ದ ಪಾರಿವಾಳವು ತನ್ನನ್ನು ಕ್ರೇನ್ ಕೆಳಗೆ ತರುತ್ತಿದ್ದ ಸಂದರ್ಭದಲ್ಲಿಯೇ ಪೊಲೀಸ್ ಠಾಣೆಯ ಅಂಗಳದಲ್ಲಿ ಕುಸಿದು ಬಿದ್ದಿದೆ.
ಕೂಡಲೇ ಪಾರಿವಾಳದ ಕಾಲಿಗೆ ಸಿಲುಕಿದ್ದ ಮಾಂಜಾವನ್ನು ಬಿಚ್ಚಿದ ಪೊಲೀಸರು, ಆ ಪಕ್ಷಿಗೆ ಆಹಾರ ಮತ್ತು ನೀರು ನೀಡಿ ಸಂತೈಸಿದ್ದಾರೆ.
https://twitter.com/bareillypolice/status/1282920215244759040?ref_src=twsrc%5Etfw%7Ctwcamp%5Etweetembed%7Ctwterm%5E1282920215244759040%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fpigeon-gets-caught-in-chinese-manjha-bareilly-police-call-crane-for-its-rescue-watch%2F621195