alex Certify ಹಕ್ಕಿ ಫೋಟೋ ನೋಡಿ ಕೋಪಗೊಂಡ ಟ್ವೀಟಿಗರು..! ಕಾರಣವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಕ್ಕಿ ಫೋಟೋ ನೋಡಿ ಕೋಪಗೊಂಡ ಟ್ವೀಟಿಗರು..! ಕಾರಣವೇನು ಗೊತ್ತಾ…?

ಕರೊನಾ ವೈರಸ್​ ಹರಡುವಿಕೆ ಕಡಿಮೆ ಮಾಡಲಿಕ್ಕೋಸ್ಕರ ವಿಶ್ವಾದ್ಯಂತ ಜನರು ಮಾಸ್ಕ್​ ಬಳಕೆ ಮಾಡ್ತಿದ್ದಾರೆ, ಆದರೆ ಕರೊನಾದಿಂದ ಬಚಾವಾಗೋ ಭರದಲ್ಲಿ ಅನೇಕರು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಕೊಕ್ಕಿನಲ್ಲಿ ಮಾಸ್ಕ್​ನ್ನ ಹಿಡಿದುಕೊಂಡಿರೋ ಹಕ್ಕಿಯ ಫೋಟೋವೊಂದು ಮನುಷ್ಯನ ಅಜಾಗರೂಕತೆಯನ್ನ ಸಾರಿ ಹೇಳುತ್ತಿದೆ.

ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಸುಸಂತಾ ನಂದಾ ಎಂಬವರು ಟ್ವಿಟರ್​ನಲ್ಲಿ ಈ ಫೋಟೋವನ್ನ ಶೇರ್​ ಮಾಡಿದ್ದಾರೆ, ಮಾಸ್ಕ್​ ಮನುಷ್ಯರ ಮುಖದಲ್ಲಿ ಇರಬೇಕು. ನೀವು ಹಾಕಿರುವ ಮಾಸ್ಕ್​ಗಳನ್ನ ವಿಲೇವಾರಿ ಮಾಡುವ ಜವಾಬ್ದಾರಿಯನ್ನೂ ನೀವೇ ವಹಿಸಿಕೊಳ್ಳಿ. ಉಳಿದ ಜೀವಚರಗಳಿಗೂ ಈ ಭೂಮಿಯ ಮೇಲಿರಲು ನಮ್ಮಷ್ಟೇ ಹಕ್ಕಿದೆ ಅಂತಾ ಬರೆದುಕೊಂಡಿದ್ದಾರೆ.

ಈ ರೀತಿಯ ಫೋಟೋ ಟ್ವಿಟರ್​ನಲ್ಲಿ ಹರಿದಾಡ್ತಾ ಇದ್ದಂತೆ ಟ್ವೀಟಿಗರು ಕೆಂಡಾಮಂಡಲರಾಗಿದ್ದಾರೆ. ಕರೊನಾದಿಂದ ನಿಮ್ಮನ್ನ ಬಚಾವು ಮಾಡಿಕೊಂಡಷ್ಟೇ ಜಾಗರೂಕತೆಯಿಂದ ಮಾಸ್ಕ್​ಗಳನ್ನೂ ವಿಲೇವಾರಿ ಮಾಡಿ. ಇಲ್ಲವಾದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿ ಮತ್ತೊಂದು ತೊಂದರೆ ಅನುಭವಿಸಬೇಕಾದೀತು ಅಂತಾ ಕಾಮೆಂಟ್ ಮಾಡ್ತಿದ್ದಾರೆ,

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...