
ಭಾರತ ಸರ್ಕಾರ ಶಾಲಾ ಪುಸ್ತಕಗಳಿಗೆ ತೆರಿಗೆ ವಿಧಿಸಲಿದೆ ಎಂಬ ಸುದ್ದಿ ಹರಡಿದೆ. ಆದ್ರೆ ಇದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಐಬಿ ಫ್ಯಾಕ್ಟ್ ಚೆಕ್ ವೇಳೆ ಇದು ಸುಳ್ಳು ಸುದ್ದಿ ಎಂಬುದು ಗೊತ್ತಾಗಿದೆ.
ತನಿಖೆ ಮಾಡಿದಾಗ, ಈ ಸುದ್ದಿ ನಕಲಿ ಎಂಬುದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ, ಶಾಲಾ ಪುಸ್ತಕಗಳ ಮೇಲೆ ತೆರಿಗೆ ವಿಧಿಸಲಿದೆ ಎಂಬ ಸುದ್ದಿ ಹರಡಿದೆ. ಈ ಸುದ್ದಿಯಲ್ಲಿ ಹುರುಳಿಲ್ಲ. ಶಾಲಾ ಪಠ್ಯ ಪುಸ್ತಕಗಳಿಗೆ ಸರ್ಕಾರ ಯಾವುದೇ ತೆರಿಗೆ ವಿಧಿಸುತ್ತಿಲ್ಲ. ಕೇಂದ್ರ ಸರ್ಕಾರ ಶಾಲಾ ಪುಸ್ತಕಗಳ ಮೇಲೆ ತೆರಿಗೆಯನ್ನು ವಿಧಿಸುವುದಿಲ್ಲ.
ಪಿಐಬಿ ಫ್ಯಾಕ್ಟ್ ಚೆಕ್ ಕೇಂದ್ರ ಸರ್ಕಾರದ ನೀತಿ, ಯೋಜನೆಗಳು, ಇಲಾಖೆಗಳು, ಸಚಿವಾಲಯಗಳ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಯುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ನಿಜವೋ ಸುಳ್ಳೋ ಎಂದು ತಿಳಿಯಲು ಪಿಐಬಿ ಫ್ಯಾಕ್ಟ್ ಚೆಕ್ ಸಹಾಯವನ್ನು ತೆಗೆದುಕೊಳ್ಳಬಹುದು. ಸ್ಕ್ರೀನ್‌ಶಾಟ್, ಟ್ವೀಟ್, ಫೇಸ್‌ಬುಕ್ ಪೋಸ್ಟ್ ಅಥವಾ ಯುಆರ್‌ಎಲ್ ಅನ್ನು ಪಿಐಬಿ ಫ್ಯಾಕ್ಟ್ ಚೆಕ್ ವಾಟ್ಸಾಪ್ ಸಂಖ್ಯೆ 918799711259 ಗೆ ಕಳುಹಿಸಬಹುದು ಅಥವಾ ಅದನ್ನು pibfactcheck@gmail.com ಗೆ ಮೇಲ್ ಮಾಡಿ ಸತ್ಯ ತಿಳಿಯಬಹುದು.