ಕೋವಿಡ್ -19 ರ ಸಮಯದಲ್ಲಿ ದೈಹಿಕ ಅನ್ಯೋನ್ಯತೆ ಕುರಿತಾಗಿ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ. ಕೊರೊನಾದಿಂದಾಗಿ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಯಾಗಿದೆ. ದೈಹಿಕ ಅನ್ಯೋನ್ಯತೆ ಬಗ್ಗೆ ಇಲ್ಲಿರುವ ಒಂದಿಷ್ಟು ಸಲಹೆಗಳಿಂದ ನಿಮಗೆ ಅನುಕೂಲವಾಗಬಹುದು.
ಪ್ರಸ್ತುತ ಜಗತ್ತು ಕೊರೋನಾ ಕಾರಣದಿಂದ ಆರೋಗ್ಯ ಬಿಕ್ಕಟ್ಟಿನತ್ತ ಸಾಗುತ್ತಿದೆ. ನಮ್ಮ ಮನಸ್ಸಿನಲ್ಲಿ ಅನೇಕ ಆಲೋಚನೆ ಉಂಟಾಗುತ್ತವೆ. ಅವುಗಳಲ್ಲಿ ದೈಹಿಕ ಅನ್ಯೋನ್ಯತೆ ಕೂಡ ಒಂದಾಗಿರುತ್ತದೆ. ಕೊರೊನಾ ಸಂದರ್ಭದಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆಯುವುದು ನಡೆದಿದೆ. ಇಂತಹ ಸಂದರ್ಭದಲ್ಲಿ ಸುರಕ್ಷಿತ ದೈಹಿಕ ಅನ್ಯೋನ್ಯತೆ ಹೇಗೆ ಸಾಧಿಸಬಹುದು ಎನ್ನುವುದು ಪ್ರಶ್ನಾರ್ಹವಾಗಿದೆ.
ಕೊರೊನಾ ವೇಳೆಯಲ್ಲೂ ಲೈಂಗಿಕ ಕ್ರಿಯೆ ನಡೆಸಬಹುದು. ಆದರೆ ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳಿವೆ. ವಿಷಯಗಳು ಆಹ್ಲಾದಕರವಾಗಿರದೆ ಇರಬಹುದು. ಸುರಕ್ಷಿತ ಲೈಂಗಿಕತೆಗಾಗಿ ವಿವಿಧ ಪರಿಹಾರ ಮಾರ್ಗ ಅನುಸರಿಸುವುದು ಮುಖ್ಯ. ಸಾಂಕ್ರಾಮಿಕ ರೋಗದ ಮೊದಲು ಇದ್ದಂತಹ ಆರೋಗ್ಯಕರ ಲೈಂಗಿಕ ಚಟುವಟಿಕೆ ಇನ್ನೂ ಮುಖ್ಯವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು.
ದುರದೃಷ್ಟವಶಾತ್ ಪ್ರಸ್ತುತ ಕೊರೊನಾ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಕಡಿಮೆಯಾಗಿದೆ ಎಂದು ಜರ್ನಲ್ ಲೀಜರ್ ಸೈನ್ಸಸ್ ವರದಿ ಮಾಡಿದೆ. ಲೈಂಗಿಕತೆಯಿಂದ ನಿರಾಳತೆ ಉಂಟಾಗುತ್ತದೆ. ಉದ್ವೇಗ, ಆತಂಕವನ್ನು ದೂರ ಮಾಡುತ್ತದೆ. ಉತ್ತಮ ನಿದ್ದೆ ಮಾಡಬಹುದಾಗಿದೆ. ಮಾತ್ರವಲ್ಲ, ಮೆದುಳಿಗೆ ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಯಾವುದೇ ದೈಹಿಕ ಸಂಪರ್ಕ ಉತ್ತಮ ಭಾವನೆ, ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಒತ್ತಡದ ಸಮಯದಲ್ಲಿ ದೈಹಿಕ ಅನ್ಯೋನ್ಯತೆಯಿಂದ ಅನುಕೂಲವಾಗುತ್ತದೆ ಎಂದು ಹೇಳಲಾಗಿದ್ದರೂ, ಕೊರೊನಾ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಕಡಿಮೆಯಾಗಿರುವುದಂತೂ ನಿಜ.
ಕೊರೊನಾ ಸಾಂಕ್ರಮಿಕ ರೋಗದ ಸಮಯದಲ್ಲಿ ದೈಹಿಕ ಅನ್ಯೋನ್ಯತೆಯನ್ನು ಅನುಭವಿಸಲು ಲೈಂಗಿಕ ಆರೋಗ್ಯ ಸಲಹೆಗಳ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
ಒಪ್ಪಿಗೆ ಮುಖ್ಯ
ಸಂಗಾತಿಯ ಕೈಹಿಡಿಯಲು, ಅವರನ್ನು ಮುದ್ದಾಡಲು, ಸಾಮೀಪ್ಯದಲ್ಲಿ ಸೇರಲು ಮಲಗುವ ಕೋಣೆಯಲ್ಲಿ ನೀವು ಉತ್ಸುಕರಾಗಿ ಇರಬಹುದು. ಆದರೆ, ಇದಕ್ಕೆ ನಿಮ್ಮ ಸಂಗಾತಿಯ ಒಪ್ಪಿಗೆ ಮುಖ್ಯ ಎನ್ನುವುದನ್ನು ಮರೆಯದಿರಿ. ಕೊರೊನಾಕ್ಕಿಂತ ಮೊದಲು ಹೆಚ್ಚು ಸ್ಪರ್ಶ ಮತ್ತು ನಿಕಟ ಸಂಪರ್ಕ ಹೊಂದಿದ್ದರೂ ಈಗ ಕಡಿಮೆಯಾಗಿದೆ. ಸಂಗಾತಿ ಆರಾಮಾಗಿದ್ದಾರೆಯೇ ಎಂಬುದರ ಬಗ್ಗೆ ಖಚಿತತೆ ಇಲ್ಲ. ಹಾಗಾಗಿ ಮೊದಲು ಅವರೊಂದಿಗೆ ಚರ್ಚಿಸಿ ಖಚಿತಪಡಿಸಿಕೊಳ್ಳಿ.
ಪರೀಕ್ಷೆ ಬಗ್ಗೆ ಮಾತಾಡಿ
ಕೋವಿಡ್-19 ಸಣ್ಣದೊಂದು ರೋಗಲಕ್ಷಣಗಳನ್ನು ನೀವು ಹೊಂದಿದ್ದರೆ ಪರೀಕ್ಷಿಸಿಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರುವುದನ್ನು ಖಚಿತವಾಗಿಸಿಕೊಳ್ಳಿ. ಯಾರೊಂದಿಗಾದರೂ ದೈಹಿಕ ಅನ್ಯೋನ್ಯತೆಯಲ್ಲಿ ತೊಡಗಿದ್ದರೆ ವೈರಸ್ ಗೆ ತುತ್ತಾಗುವ ಅವಕಾಶವಿರುತ್ತದೆ ಎಂಬುದು ನಿಜ. ಹಾಗಾಗಿ, ನೀವು ಟೆಸ್ಟ್ ಬಗ್ಗೆ ಚರ್ಚಿಸಿ ಖಚಿತ ಮಾಡಿಕೊಳ್ಳಿ. ಯಾರೊಂದಿಗಾದರೂ ಬೆರೆಯಲು ನಿರ್ಧರಿಸಿದರೂ ಎಲ್ಲದರ ಬಗ್ಗೆ ಸ್ಪಷ್ಟವಾಗಿ ಚರ್ಚೆ ನಡೆಸಿ. ನಿಕಟ ದೈಹಿಕ ಸಂಪರ್ಕ, ಚುಂಬನ, ಲೈಂಗಿಕ ಚಟುವಟಿಕೆ ಮೊದಲು ಸೋಂಕಿನ ಲಕ್ಷಣಗಳಿದ್ದಲ್ಲಿ ಲೈಂಗಿಕ ಚಟುವಟಿಕೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳಿ.
ಅಪಾಯಗಳ ಬಗ್ಗೆ ಎಚ್ಚರವಾಗಿರಿ
ಕೊರೊನಾ ಕಾಲದಲ್ಲಿ ಸಾಧ್ಯವಾದಷ್ಟು ಪಾರದರ್ಶಕವಾಗಿರುವುದು ಮುಖ್ಯವಾಗಿದೆ. ಸಂಗಾತಿಯೊಂದಿಗೆ ನೀವು ವಾಸಿಸುತ್ತಿದ್ದರೆ ದೈಹಿಕ ಅನ್ಯೋನ್ಯತೆಯಲ್ಲಿ ತೊಡಗಿದ್ದರೆ ಕೊರೊನಾ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಜನಸಂದಣಿಯಿಂದ ದೂರವಿರಿ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿರಿ. ನೀವು ಯಾವುದಾದರೂ ಪ್ರೋಟೋಕಾಲ್ ಗಳನ್ನು ಅನುಸರಿಸದಿದ್ದರೆ ಮಾಸ್ಕ್ ಧರಿಸದೆ ಜನದಟ್ಟಣೆ ಸ್ಥಳಗಳಲ್ಲಿದ್ದಲ್ಲಿ ಅಪಾಯ ಎದುರಾಗಬಹುದಾಗಿದೆ. ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಕೆ ಮಾಡಿ. ಇದು ಕೊರೊನಾ ಮತ್ತು ಇತರೆ ಲೈಂಗಿಕವಾಗಿ ಹರಡುವ ರೋಗಗಳಿಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ತಂತ್ರಜ್ಞಾನದೊಂದಿಗೆ ಗೆಳೆತನವಿರಲಿ
ನೀವು ಸಂಗಾತಿಯಿಂದ ದೂರವಿದ್ದ ಸಂದರ್ಭದಲ್ಲಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಬಯಸಿದರೆ ತತಂತ್ರಜ್ಞಾನದ ಸಹಾಯ ಪಡೆಯಬಹುದು. ಅನ್ಯೋನ್ಯತೆ ಪಡೆಯಲು ವಿಡಿಯೋ ಕಾಲ್ ಅನೇಕರಿಗೆ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಸಂಶೋಧನೆ ಹೇಳುತ್ತದೆ. ಸಹಜವಾಗಿ ಇಲ್ಲಿ ಅಪಾಯಗಳಿವೆ ಎನ್ನುವುದು ನಿಜ. ವೈಯಕ್ತಿಕ ಫೋಟೋ, ನಗ್ನಚಿತ್ರ ಹಂಚಿಕೊಂಡಾಗ ಸೈಬರ್ ಅಪರಾಧವಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಸಂಗಾತಿಯನ್ನು ಚೆನ್ನಾಗಿ ಅರಿಯಲು ಪ್ರಯತ್ನಿಸಿ
ಕೊರೊನಾ ಸಂದರ್ಭದಲ್ಲಿ ಸಂಗಾತಿಯೊಂದಿಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಒಬ್ಬರನ್ನೊಬ್ಬರು ನೋಡಲು ಪ್ರಯತ್ನಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಆದರೆ ನೆನಪಿರಲಿ, ನೀವು ಏನೂ ಮಾಡದಿದ್ದರೆ ಸುರಕ್ಷಿತ ಲೈಂಗಿಕ ಪಾಲುದಾರರು ಎಂಬುದು ನಿಮಗೆ ನೆನಪಿರಲಿ. ಇದಕ್ಕಾಗಿ ಲೈಂಗಿಕ ಆಟಿಕೆಗಳನ್ನು ಬಳಸಿಕೊಂಡು ಆನಂದಿಸಬಹುದು. ನಿಯಮಿತವಾಗಿ ಆಟಿಕೆಗಳನ್ನು ಸ್ವಚ್ಛಗೊಳಿಸಿ ಸೋಂಕು ರಹಿತವಾಗಿ ಇರುವುದಕ್ಕೆ ಪ್ರಯತ್ನಿಸಿ. ಕೊರೊನಾ ವೈರಸ್ ಕೆಲವು ದಿನಗಳವರೆಗೆ ಬದುಕಬಲ್ಲದು. ಹಾಗಾಗಿ ಸ್ವಚ್ಛತೆ ಬಗ್ಗೆಯೂ ಗಮನವಿರಲಿ. ಚಿಂತಿಸಬೇಡಿ, ಈ ಲೈಂಗಿಕ ಆರೋಗ್ಯ ಸಲಹೆಗಳನ್ನು ಅನುಸರಿಸಿ ಎಂದು ಹೇಳಲಾಗಿದೆ.