
ಕಾಬೊಂಬಾ ಫರ್ಕಾಟಾ ಎಂಬ ಜಾತಿಗೆ ಸೇರಿದ ಮುಲ್ಲನ್ ಪಾಯಲ್ ಸಸ್ಯರಾಶಿಯಿಂದಾಗಿ ಇಡೀ ಗ್ರಾಮವೇ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ.
ನದಿ ನೀರಿನ ಮೇಲೆಲ್ಲ ಗುಲಾಬಿ ಬಣ್ಣದ ಹೂವಿನ ಹೊದಿಕೆಗಳು ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಗ್ರಾಮ ಇದೀಗ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಅನೇಕರು ಈ ಗ್ರಾಮವನ್ನ ವೀಕ್ಷಿಸಬೇಕು ಅಂತಾನೂ ತಮ್ಮ ಆಸೆ ಹೊರಹಾಕುತ್ತಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅನೇಕರು ಈ ಹೂವುಗಳನ್ನ ಮಾರುವ ಮೂಲಕ ಹೊಸ ಆದಾಯದ ಮೂಲವನ್ನ ಕಂಡುಕೊಂಡಿದ್ದಾರೆ. ಈ ಹೂವಿನ ವಿಚಾರವಾಗಿ ಮಾತನಾಡಿದ ಸಸ್ಯಶಾಸ್ತ್ರಜ್ಞ ಡಾ.ಪಿ. ದಿಲೀಪ್. ಈ ಹೂವುಗಳು ನೋಡಲು ಸುಂದರವಾಗಿರಬಹುದು ಆದರೆ…..ಜಲಮೂಲಗಳಿಗೆ ಅಪಾಯ ತಂದೊಡ್ಡಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.