
ರೈತ ವಿರೋಧಿ ಮಸೂದೆಗಳನ್ನ ಧಿಕ್ಕರಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ಪರವಾಗಿ ದೇಶದ ಹಲವು ಭಾಗಗಳಲ್ಲಿನ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ.
ರಸ್ತೆ ತಡೆ, ರೈಲು ಮಾರ್ಗ ತಡೆ ಸೇರಿದಂತೆ ಸಾಕಷ್ಟು ರೀತಿಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಪಂಜಾಬ್ನಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು ಜನಜೀವನ ಅಸ್ತವ್ಯಸ್ಥಗೊಂಡಿತ್ತು. 30ಕ್ಕೂ ಹೆಚ್ಚು ಸಂಸ್ಥೆಗಳು ಪಂಜಾಬ್ ಬಂದ್ಗೆ ಕರೆ ನೀಡಿದ್ದವು.
ಪಟಿಯಾಲ, ಲುದಿಯಾನ, ಬಟಿಂಡಾ, ಮೊಗಾ. ಹೋಶಿಯಾರ್ ಪುರ ಜಲಂದರ್ ಹಾಗೂ ಇತರ ನಗರಗಳಲ್ಲಿ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಇದೆಲ್ಲದರ ನಡುವೆ ರೈತ ಪರ ಪ್ರತಿಭಟನೆಯ ನಿರ್ದಿಷ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡಿದ್ದರು. ಆದರೆ ಈ ವೇಳೆ ಸಿನಿಮೀಯ ರೀತಿಯಲ್ಲಿ ಪೊಲೀಸ್ ವಾಹನದ ಮೇಲೆ ಹತ್ತಿದ ಪ್ರತಿಭಟನಾಕಾರನೊಬ್ಬ ವಾಟರ್ ಕ್ಯಾನ್ನ್ನ ಬಂದ್ ಮಾಡಿದ್ದಾರೆ. ಪೊಲೀಸರು ಅವರನ್ನ ಬೆನ್ನಟ್ಟುತ್ತಿದ್ದಂತೆ ಆತ ಸಿನಿಮೀಯ ಮಾದರಿಯಲ್ಲಿ ಎಸ್ಕೇಪ್ ಆಗಿದ್ದಾರೆ.