![Photo of Doctor's Pruney Hand After Wearing Gloves for 10 Hours ...](https://images.news18.com/ibnlive/uploads/2020/06/1592805369_untitled-design-2020-06-22t112441.479.png)
ವಿಶ್ವದಲ್ಲಿ ಇದೀಗ ಕೊರೋನಾ ಸೃಷ್ಟಿಸಿರುವ ಕೋಲಾಹಲ ಅಷ್ಟಿಷ್ಟಲ್ಲ. ಪ್ರತಿಯೊಬ್ಬರು ಕೊರೋನಾದಿಂದ ಒಂದಿಲ್ಲೊಂದು ರೀತಿ ಬಳಲುತ್ತಿದ್ದಾರೆ. ಹೀಗಾಗಿ ಕೊರೋನಾದಿಂದ ಜನರನ್ನು ರಕ್ಷಿಸಲು ಶ್ರಮಿಸುತ್ತಿರುವ ವೈದ್ಯರು ಹಗಲು – ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ.
ಹೌದು, ಕೊರೋನಾದಿಂದ ಜನರನ್ನು ರಕ್ಷಿಸಿಸಲು ವೈದ್ಯರು ಹಗಲು – ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ. ಈ ವೇಳೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಗ್ಲೌಸ್, ಪಿಪಿಇ ಕಿಟ್ ಧರಿಸುತ್ತಾರೆ. ಆದರೆ ಅದರಿಂದ ಆಗುವ ಅನಾಹುತದ ಫೋಟೋ ಇಲ್ಲಿದೆ ನೋಡಿ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವೀಟ್ ಮಾಡಿದ್ದು, ವೈದ್ಯರೊಬ್ಬರು ಸತತ 10 ಗಂಟೆ ಕೆಲಸ ಮಾಡಿದ ಬಳಿಕ ಅವರ ಕೈಗಳನ್ನು ತೋರಿಸಿರುವ ಫೋಟೋ ಇದಾಗಿದೆ. ಗ್ಲೌಸ್ ಹಾಕಿರಲೇಬೇಕಾದ ಕಾರಣ ಚರ್ಮವೆಲ್ಲ ಸುಕ್ಕುಗಟ್ಟಿರುವ ರೀತಿ ಆಗಿದೆ.
ಈ ಪೋಸ್ಟ್ ಹಾಕುತ್ತಿದ್ದಂತೆ ಅನೇಕರು ತಮ್ಮ ಕೈಗಳ ಪೋಸ್ಟ್ ಮಾಡಿದ್ದಾರೆ. ಕೆಲವರು ನಾವು ರೈತರಾಗಿದ್ದೇವೆ ಎಂದರೆ, ಇನ್ನು ಕೆಲವರು ಕೊರೋನಾ ವಾರಿಯರ್ಸ್ ಎಂದು ಹೇಳಿಕೊಂಡು, ತಮ್ಮ ಹಸ್ತದ ಫೋಟೋ ಹಾಕಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.