ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ನಿನ್ನೆ ನಡೆದ ಮತದಾನದಲ್ಲಿ ತಾಯಿ ಮತದಾನ ಮಾಡಲು ತೆರಳಿದ್ದ ವೇಳೆ ಅಳುತ್ತಿದ್ದ ಕಂದಮ್ಮನನ್ನ ಪೊಲೀಸ್ ಒಬ್ಬರು ಎತ್ತಿಕೊಂಡು ಸಂತೈಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗ್ತಿದೆ .
ಪೋಟೋದಲ್ಲಿ ಕೆಂಪು ಬಣ್ಣದ ಹಾಸಿನ ಮೇಲೆ ಮಲಗಿದ್ದ ಮಗುವನ್ನ ಮತಗಟ್ಟೆಯ ಹೊರಗಡೆ ಪೊಲೀಸ್ ಹಿಡಿದುಕೊಂಡಿರೋದನ್ನ ಕಾಣಬಹುದಾಗಿದೆ. ಈ ಫೋಟೋದಲ್ಲಿರುವ ಪೊಲೀಸ್ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಕಾನ್ಸ್ಟೇಬಲ್ ಆಗಿದ್ದು ತಮಿಳುನಾಡು ಚುನಾವಣಾ ಡ್ಯೂಟಿಗೆ ನೇಮಿಸಲಾಗಿದೆ. ಈ ಫೋಟೋವನ್ನ ಆಂಧ್ರಪ್ರದೇಶ ಪೊಲೀಸ್ ಇಲಾಖೆ ಟ್ವಿಟರ್ನಲ್ಲಿ ಶೇರ್ ಮಾಡಿದೆ.
ತಮಿಳುನಾಡು ಚುನಾವಣಾ ಡ್ಯೂಟಿಗೆ ನೇಮಕಗೊಂಡಿದ್ದ ಆಂಧ್ರ ಪ್ರದೇಶ ಪೊಲೀಸ್ ಪೇದೆ ತಾಯಿ ಮತಗಟ್ಟೆಯಲ್ಲಿ ಮತ ಚಲಾಯಿಸಿ ಹೊರಬರುವವರೆಗೂ 1 ತಿಂಗಳ ಕಂದಮ್ಮನನ್ನ ನೋಡಿಕೊಂಡಿದ್ದಾರೆ. ಈ ಫೋಟೋ ಅನೇಕರ ಹೃದಯವನ್ನ ಗೆದ್ದಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ಫೋಟೋ ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.