ಸಾಮಾನ್ಯವಾಗಿ ತೆಂಗಿನಕಾಯಿ ಎಂದರೆ ನಮಗೆಲ್ಲಾ ಮೊದಲು ನೆನಪಾಗುವುದು ತರಿ ತರಿಯಾದ ಅದರ ಮೇಲ್ಮೈ. ಆದರೆ, ಚೆನ್ನಾಗಿ ಪಾಲಿಶ್ ಮಾಡಿ ನುಣುಪಾದ ಮೇಲ್ಮೈ ಇರುವ ತೆಂಗಿನ ಕಾಯಿಯೊಂದರ ಚಿತ್ರವೊಂದನ್ನು ರೆಡ್ಡಿಟ್ ಬಳಕೆದಾರರು ಶೇರ್ ಮಾಡಿಕೊಂಡಿದ್ದಾರೆ.
ಸುಲಿದ ತೆಂಗಿನಕಾಯಿಯನ್ನು ಈ ರೀತಿ ಕಂಡರಿಯದ ನೆಟ್ಟಿಗರು ಇದನ್ನು ನೋಡಿ ಬಲೇ ಆಶ್ಚರ್ಯಕ್ಕೀಡಾಗಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಬೋರ್ ಆದ ವ್ಯಕ್ತಿ ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ಕಾಮೆಂಟ್ನಲ್ಲಿ ಹಾಕಿದ್ದಾರೆ.