ದೆಹಲಿ ವಿಮಾನ ನಿಲ್ದಾಣದಿಂದ ವಿಮಾನವೇರುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಫೆಬ್ರವರಿಯಿಂದ ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಗೆ ಹೆಚ್ಚಿನ ಹಣ ವಸೂಲಿ ಮಾಡಲು ಏರಾ ಅನುಮತಿ ನೀಡಿದೆ. ಫೆಬ್ರವರಿ 1ರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುವುದು.
ದೆಹಲಿಯಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನವೇರಲು ಪ್ರಯಾಣಿಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಫೆಬ್ರವರಿ 1 ರಿಂದ ಮಾರ್ಚ್ 31 ರವರೆಗೆ ಹೆಚ್ಚುವರಿ ಶುಲ್ಕ ನೀಡಬೇಕು. ಹೆಚ್ಚುವರಿಯಾಗಿ 65 ರೂಪಾಯಿ 98 ಪೈಸೆ ಪಾವತಿಸಬೇಕು. ತೆರಿಗೆಯನ್ನು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ. ಏಪ್ರಿಲ್ 1ರಿಂದ ಇದು ಕಡಿತಗೊಳ್ಳಲಿದೆ. 2021-22ರ ಹಣಕಾಸು ವರ್ಷದಲ್ಲಿ ಶುಲ್ಕ 53 ರೂಪಾಯಿಯಾಗಲಿದೆ. 2022-23ರ ಹಣಕಾಸು ವರ್ಷದಲ್ಲಿ 52 ರೂಪಾಯಿ 56 ಪೈಸೆಯಾಗಿರಲಿದೆ, 2023-24ರ ಹಣಕಾಸು ವರ್ಷದಲ್ಲಿ ಈ ಶುಲ್ಕ 51 ರೂಪಾಯಿ 97 ಪೈಸೆಯಾಗಿರಲಿದೆ.
ಹೆಚ್ಚುವರಿಯಾಗಿ 200-300 ರೂಪಾಯಿ ವಸೂಲಿ ಮಾಡಲು ಡಿಐಎಎಲ್ ಕೋರಿತ್ತು. ಕೊರೊನಾದಿಂದ ನಷ್ಟವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಳ್ಳುವಂತೆ ಡಿಐಎಎಲ್ ಹೇಳಿತ್ತು. ಆದ್ರೆ ಏರಾ ಇದಕ್ಕೆ ಅನುಮತಿ ನೀಡಿಲ್ಲ.