ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ ತರಕಾರಿ ಅಂಗಡಿ ಎತ್ತಂಗಡಿ ಮಾಡಲು ಹೋದಾಗ ಅಚ್ಚರಿಯ ಘಟನೆ ನಡೆದಿದೆ.
ತರಕಾರಿ ಮಾರಾಟ ಮಾಡ್ತಿದ್ದ ಮಹಿಳೆಯೊಬ್ಬಳ ಇಂಗ್ಲೀಷ್ ಕೇಳಿ ಎಲ್ಲರೂ ದಂಗಾಗಿದ್ದಾರೆ. ಇಷ್ಟೇ ಅಲ್ಲ ಮಹಿಳೆ ಪಿಎಚ್ಡಿ ಮಾಡಿದ್ದಾಳೆ ಎಂಬುದು ಮತ್ತಷ್ಟು ಚಕಿತಗೊಳಿಸಿದೆ.
ಆಕೆ ಹೆಸರು ರೈಸಾ ಅನ್ಸಾರಿ. 60 ವರ್ಷಗಳಿಂದ ಅವ್ರ ಕುಟುಂಬ ಮಾಲ್ವಾ ಮೈಲ್ ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇಂಧೋರ್ ಸ್ಥಳೀಯ ಆಡಳಿತ ಒಂದೇ ಕಡೆ ನಿಂತು ವ್ಯಾಪಾರ ಮಾಡುವುದನ್ನು ನಿಷೇಧಿಸಿದೆ. ಇದಕ್ಕೆ ತರಕಾರಿ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗಿದೆ. ಈ ವೇಳೆ ಅಧಿಕಾರಿಗಳ ಜೊತೆ ತರಕಾರಿ ಮಾರಾಟ ಮಾಡ್ತಿದ್ದ ರೈಸಾ ಇಂಗ್ಲೀಷ್ ನಲ್ಲಿ ಮಾತನಾಡಿದ್ದಾಳೆ.
ಆಕೆಯನ್ನು ಮಾತನಾಡಿಸಿದಾಗ ಆಕೆ ಪಿಎಚ್ಡಿ ಮಾಡಿರುವುದು ಗೊತ್ತಾಗಿದೆ. ನಿರ್ದಿಷ್ಟ ವರ್ಗಕ್ಕೆ ಸೇರಿದ್ದ ಕಾರಣ ನನಗೆ ಕೆಲಸ ಸಿಕ್ಕಿಲ್ಲ. ಹಾಗಾಗಿ ತರಕಾರಿ ಮಾರಾಟ ಮಾಡುತ್ತಿದ್ದೇನೆ. ಈಗ ಇಲ್ಲಿಂದ ನಮ್ಮನ್ನು ಎತ್ತಂಗಡಿ ಮಾಡಿಸಿದ್ರೆ ಬದುಕು ಕಷ್ಟವಾಗುತ್ತದೆ ಎಂದು ರೈಸಾ ಹೇಳಿದ್ದಾಳೆ.