ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ 21 ದಿನದಿಂದ ಏರಿಕೆಯಾಗುತ್ತಿದೆ. ಇವತ್ತು ಪೆಟ್ರೋಲ್ ಗೆ 25 ಪೈಸೆ, ಡೀಸೆಲ್ 21 ಪೈಸೆಯಷ್ಟು ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 88.38 ರೂಪಾಯಿ ಆಗಿದ್ದು, ಡೀಸೆಲ್ ಲೀಟರ್ ಗೆ 80.40 ರೂಪಾಯಿ ಆಗಿದೆ.
ವಿವಿಧ ರಾಜ್ಯಗಳಲ್ಲಿ ತೆರಿಗೆ ಮತ್ತು ಮೌಲ್ಯವರ್ಧಿತ ತೆರಿಗೆ ಆಧರಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. 80 ರೂ. ಗಡಿ ದಾಟಿದ ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, 100 ರೂ. ಸಮೀಪಕ್ಕೆ ಬಂದಿದೆ.