ಮೀರಟ್: ವರ -ವಧು ಇಬ್ಬರೂ ಮೂರು ಅಡಿ. ಅದೇನು ಗೊಂಬೆಗಳ ಮದುವೆಯಲ್ಲ. ಕುಳ್ಳಗಿರುವವರ ಮದುವೆ.
ಉತ್ತರ ಪ್ರದೇಶ ಮೀರತ್ ನ ದವಾಯಿ ನಗರದ ನೌಚಂಡಿ ಪ್ರದೇಶದಲ್ಲಿ ಈ ಮದುವೆ ನಡೆದಿದೆ.
ವರನ ಕಡೆಯ 25 ಹಾಗೂ ವಧುವಿನ ಕಡೆಯ 25 ಜನ ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು. ವಧು, ವರರ ಕಾರಣದಿಂದ ಈಗ ಮದುವೆ ಆ ಭಾಗದಲ್ಲಿ ಚರ್ಚೆಯ ವಿಷಯವಾಗಿದೆ.
ಫೈರೋಜ್(25) ಅವರ ನಿಖಾ ಜೈನಾಬ್ (22) ಎಂಬುವವರ ಜತೆ ಶನಿವಾರ ನಡೆದಿದ್ದು, ಇಬ್ಬರ ಜೋಡಿ ನೋಡಿ ಜನ ಬಾಯಿ ಮೇಲೆ ಬೆರಳಿಟ್ಟಿದ್ದಾರೆ.
“ವಯಸ್ಸಾದರೂ ನಾನು ಕುಳ್ಳಗಿದ್ದ ಕಾರಣ ನನಗೆ ಮದುವೆಯಾಗುತ್ತದೆ ಎಂಬ ವಿಶ್ವಾಸ ನನಗಿರಲಿಲ್ಲ. ಜೈನಾಬ್ ಬಗ್ಗೆ ನನ್ನ ತಂದೆ ಹೇಳಿದಾಗ ನಾನು ತುಂಬಾ ಖುಷಿಪಟ್ಟೆ. ಇನ್ನು ನನಗಾಗಿ ಜೈನಾಬ್ ಇದ್ದಾಳೆ. ನಾನು ಯಾವುದೇ ಬೇಸರ ಇಲ್ಲದೆ ಜೀವನ ಕಳೆಯುತ್ತೇನೆ” ಎಂದು ಫೈರೋಜ್ ಹೇಳಿಕೊಂಡಿದ್ದಾರೆ.
“ಮದುವೆಗೆ ಪ್ರಸ್ತಾಪ ಬಂದಾಗ ನನಗೆ ನಂಬಲಾಗಲಿಲ್ಲ. ಜೋಡಿ ಇಷ್ಟು ಸುಂದರವಾಗಿರುತ್ತದೆ ಎಂದುಕೊಡಿರಲಿಲ್ಲ. ಇದು ಅಲ್ಲಾಹನ ಬಹುಮಾನ” ಎಂದು ಫೈರೋಜ್ ತಂದೆ ರಿಯಾಜುದ್ದೀನ್ ಪ್ರತಿಕ್ರಿಯಿಸಿದ್ದಾರೆ.