alex Certify ಬೆಚ್ಚಿಬೀಳಿಸುತ್ತೆ ಈ ಸುದ್ದಿ: Olx ​ನಲ್ಲೂ ರೆಮ್ ಡಿಸಿವರ್‌ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಈ ಸುದ್ದಿ: Olx ​ನಲ್ಲೂ ರೆಮ್ ಡಿಸಿವರ್‌ ಮಾರಾಟ

ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ರೆಮ್ ಡಿಸಿವರ್​ ಇಂಜೆಕ್ಷನ್​ ಅಭಾವವನ್ನ ದೇಶ ಎದುರಿಸುತ್ತಿದ್ದರೆ ಇತ್ತ ಒಎಲ್​ಎಕ್ಸ್​​ ವೆಬ್​ಸೈಟ್​​ನಲ್ಲಿ ಈ ರೆಮ್‌ ಡಿಸಿವರ್ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ. ಗುಜರಾತ್​ ಹಾಗೂ ಮಹಾರಾಷ್ಟ್ರ ಭಾಗದಿಂದ ಈ ರೆಮ್‌ ಡಿಸಿವರ್​ ಲಸಿಕೆಗಳನ್ನ ಮಾರಾಟ ಮಾಡಲಾಗುತ್ತಿದೆ.

ಅನೇಕ ರಾಜ್ಯಗಳಲ್ಲಿ ಕೊರೊನಾ ಅಭಾವ ಎದುರಿಸುತ್ತಿರುವ ಈ ಸಮಯದಲ್ಲಿ ರೆಮ್‌ ಡಿಸಿವರ್​ ಲಸಿಕೆಗಳನ್ನ ಪಡೆಯಲು ಜನರು ಔಷಧಾಲಯಗಳ ಮುಂದೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರೆ ಇತ್ತ ಒಎಲ್​ಎಕ್ಸ್​ನಲ್ಲಿ ಪರಿಶೀಲನೆಯನ್ನೇ ಮಾಡದೇ ರೆಮ್‌ ಡಿಸಿವರ್​​ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ.‌

ಈಗಾಗಲೇ ಬ್ಲಾಕ್​ ಮಾರ್ಕೆಟ್​ಗಳಲ್ಲಿ ರೆಮ್ ಡಿಸಿವರ್​​ ಲಸಿಕೆ ಮಾರಾಟವಾಗ್ತಿರುವ ಬೆನ್ನಲ್ಲೇ ಇದೀಗ ಒಎಲ್​ಎಕ್ಸ್​ನಲ್ಲಿ ರೆಮ್‌ ಡಿಸಿವರ್​ ಇಂಜೆಕ್ಷನ್​ಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಈ ವೆಬ್​ಸೈಟ್​ನಲ್ಲಿ ರೆಮ್‌ ಡಿಸಿವರ್​ ಇಂಜೆಕ್ಷನ್​ಗಳನ್ನ 5000 ರಿಂದ 6000 ರೂಪಾಯಿಗೆ ಮಾರಾಟಕ್ಕೆ ಲಭ್ಯವಿದೆ. ಮಹಾರಾಷ್ಟ್ರದ ಮೂಲದ ವ್ಯಕ್ತಿ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಆದರೆ 100 ರೆಮ್‌ ಡಿಸಿವರ್​ ಬಾಟಲಿಯ ಜಾಹಿರಾತನ್ನ ನೀಡಿದ್ದ ವ್ಯಕ್ತಿ ಒಂದು ಬಾಟಲಿಗೆ 1400 ರಿಂದ 1600 ರೂಪಾಯಿ ದರ ನಿಗದಿ ಮಾಡಿರೋದಾಗಿ ಹೇಳಿದ್ದಾನೆ. ಒಎಲ್​ಎಕ್ಸ್​ನಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗದ ವಸ್ತುಗಳ ಸಾಲಿನಲ್ಲಿ ಔಷಧಿಗಳೂ ಸೇರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...