alex Certify ಹೆಚ್ಚುತ್ತಿರುವ ʼಕೊರೊನಾʼ ಸಾವಿನ ಸಂಖ್ಯೆ ಬಗ್ಗೆ ಮಧ್ಯಪ್ರದೇಶ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚುತ್ತಿರುವ ʼಕೊರೊನಾʼ ಸಾವಿನ ಸಂಖ್ಯೆ ಬಗ್ಗೆ ಮಧ್ಯಪ್ರದೇಶ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸಾವಿನ ವರದಿ ಸಂಬಂಧ ಮಧ್ಯ ಪ್ರದೇಶ ಸಚಿವ ಪ್ರೇಮ್​ ಸಿಂಗ್​ ಪಟೇಲ್​ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

ಜನತೆ ಮಾಸ್ಕ್​ ಧರಿಸೋದು, ಕೈ ತೊಳೆದುಕೊಳ್ಳೋದು, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದನ್ನ ಮಾಡಬೇಕು ಎಂದು ಹೇಳಿದ ಪ್ರೇಮ್​ ಸಿಂಗ್​​ ಬಳಿಕ ಕೊರೊನಾ ಸಾವಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ಈ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಈ ಸಾವುಗಳನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಎಲ್ಲರೂ ಕೊರೊನಾ ಸೋಂಕು ಬಾರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ನೀವು ನಿತ್ಯ ಜನರು ಕೊರೊನಾದಿಂದ ಸಾಯುತ್ತಿದ್ದಾರೆ ಎಂದು ಹೇಳುತ್ತಿದ್ದೀರಾ. ವಯಸ್ಸಾದ ಮೇಲೆ ಜನರು ಸಾಯಲೇಬೇಕಲ್ಲವೇ ಎಂದು ಹೇಳಿದ್ರು.

ಎರಡು ದಿನಗಳ ಹಿಂದಷ್ಟೇ ಮಧ್ಯಪ್ರದೇಶ ಬಿಜೆಪಿ ನಾಯಕ ಕಮಲ್​ ಪ್ರತಾಪ್​ ತಮ್ಮ ಬರ್ತಡೇ ಪಾರ್ಟಿಗಾಗಿ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ದರು. ಶಾದೋಲ್​ ಜಿಲ್ಲೆಯಲ್ಲಿ ಲಾಕ್​ಡೌನ್​ ಜಾರಿಯಲ್ಲಿದ್ದರೂ ಪಾರ್ಟಿ ಮಾಡುವ ಮೂಲಕ ಬೇಜವಾಬ್ದಾರಿಯನ್ನ ಪ್ರದರ್ಶಿಸಿದ್ರು.

ಇನ್ನು ಮಧ್ಯ ಪ್ರದೇಶದ ಶಿವಪುರಿ ಎಂಬಲ್ಲಿ ಸಚಿವರು ಭೇಟಿ ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೊರೊನಾ ರೋಗಿಯನ್ನ ದಾಖಲು ಮಾಡಿಕೊಳ್ಳುವಲ್ಲಿ ವಿಳಂಬ ಮಾಡಿದ ಪರಿಣಾಮ ಅವರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...