ಕೊರೊನಾ ನಿಯಂತ್ರಣಕ್ಕಾಗಿ ನೀಡುತ್ತಿರುವ ಲಸಿಕೆಯನ್ನು 50 ವರ್ಷ ಮೇಲ್ಪಟ್ಟವರಿಗೂ ಅನ್ವಯಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾರ್ಚ್ ತಿಂಗಳಿನಿಂದ ಹಿರಿಯ ನಾಗರಿಕರಿಗೂ ಲಸಿಕೆ ಸಿಗಲಿದೆ.
ಈ ಕುರಿತು ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಕೋವಿಡ್-19 ನಿರ್ಮೂಲನೆಗೆಂದು ಕೊಡುತ್ತಿರುವ ಲಸಿಕೆಯನ್ನು ಮುಂದಿನ ಹಂತದಲ್ಲಿ ಅಂದರೆ, ಮಾರ್ಚ್ ತಿಂಗಳಿನಿಂದ 50 ವರ್ಷ ದಾಟಿದವರಿಗೂ ವಿಸ್ತರಿಸಲಾಗುತ್ತದೆ ಎಂದಿದ್ದಾರೆ.
ಬಿಜೆಪಿ ಐಟಿ ಸೆಲ್ ವಿರುದ್ದ ತನಿಖೆಗೆ ಮುಂದಾದ ʼಮಹಾʼ ಸರ್ಕಾರ
ಈಗಾಗಲೇ ಖಾಸಗಿ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ಕೂಡ ಲಸಿಕಾಭಿಯಾನದ ಭಾಗವಾಗಿದ್ದಾರೆ. ತುರ್ತು ಬಳಕೆದಾರರಿಗೆ ಮಾತ್ರ ಲಸಿಕೆ ನೀಡುತ್ತಿದ್ದು, ಮುಕ್ತ ಮಾರುಕಟ್ಟೆಗೆ ಬಿಟ್ಟಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕಳೆದ 7 ದಿನಗಳಿಂದ ದೇಶದ 188 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗೆಂದ ಮಾತ್ರಕ್ಕೆ ಜನರು ಕೋವಿಡ್-19 ನಿಯಮಾವಳಿ ಅನುಸರಿಸದೆ ಇರಬಾರದು. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಲೇಬೇಕು ಎಂದೂ ಎಚ್ಚರಿಕೆ ನೀಡಿದ್ದಾರೆ.