
ನವದೆಹಲಿ: ಮಾರಕ ಕೊರೊನಾ ಸೋಂಕು ನಿವಾರಣೆಗೆ ವಿಶ್ವದಲ್ಲಿ ಅನೇಕ ಸಂಶೋಧಕರು ಔಷಧ ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅನೇಕ ಔಷಧಗಳು ಕೊರೋನಾ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಕೊರೋನಾ ಸೋಂಕಿಗೆ ಔಷಧ ಕಂಡು ಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ತಿಳಿಸಿದೆ. ಪತಂಜಲಿ ಕಂಪನಿಯ ಸಿಇಒ ಆಚಾರ್ಯ ಬಾಲಕೃಷ್ಣ ಅವರು, ಕೊರೊನಾ ಸೋಂಕಿತರ ಮೇಲೆ ಪ್ರಯೋಗಿಸಲಾದ ಪತಂಜಲಿ ಕಂಪನಿ ಔಷಧ ಶೇಕಡ ನೂರರಷ್ಟು ಉತ್ತಮ ಫಲಿತಾಂಶ ನೀಡಿದ್ದರಿಂದ 14 ದಿನದ ಅವಧಿಯಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ರಚಿಸಿದ ವಿಜ್ಞಾನಿಗಳ ತಂಡ ಕೊರೊನಾ ಸೋಂಕು ನಿವಾರಿಸುವ ಔಷಧ ಕಂಡುಹಿಡಿದಿದೆ. ಇದನ್ನು ಸೋಂಕಿತರ ಮೇಲೆ ಪ್ರಯೋಗಿಸಿದಾಗ ಶೇಕಡ ನೂರರಷ್ಟು ಉತ್ತಮ ಫಲಿತಾಂಶ ಬಂದಿದೆ. ಇನ್ನೊಂದು ವಾರದೊಳಗೆ ಈ ಕುರಿತಾದ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.