ಭಾರತದಲ್ಲಿ ವಿವಿಧ ಜಾತಿ- ಧರ್ಮಗಳು ಆಚರಣೆಯಲ್ಲಿದ್ದರೂ ನಂಬಿಕೆ ವಿಷಯದಲ್ಲಿ ಮಾತ್ರ ಯಾವ ಬೇಧ-ಭಾವವೂ ಇಲ್ಲವೆಂಬುದಕ್ಕೆ ಪ್ರಚಲಿತವಾಗಿ ನಡೆಯುತ್ತಿರುವ ಈ ಆಚರಣೆಯೇ ಸಾಕ್ಷಿಯಾಗಿದೆ.
ಈ ಬಾಬಾನ ಸನ್ನಿಧಿಗೆ ಹೋದರೆ ಪಾಸ್ ಪೋರ್ಟ್ ನಿರ್ವಿಘ್ನವಾಗಿ ಆಗುತ್ತದೆ ಹಾಗೂ ವಿದೇಶ ಯೋಗ ಶೀಘ್ರದಲ್ಲೇ ಕೂಡಿ ಬರುತ್ತದೆ ಎಂಬ ನಂಬಿಕೆಯಿಂದ ಜಾತಿ-ಬೇಧವಿಲ್ಲದೆ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಈ ಕಾರಣಕ್ಕಾಗಿ ಜಮ್ಶೆಡ್ ಪುರದ ಹಜ್ರತ್ ಮಿಸ್ಕಿನ್ ಷಾ ಸಮಾಧಿಗೆ ಜಾತಿ ಬೇಧವಿಲ್ಲದೇ ಎಲ್ಲರೂ ಬಂದು ಪೂಜೆ ಸಲ್ಲಿಸುತ್ತಾರೆ. ಅದರಲ್ಲೂ ಪಾಸ್ ಪೋರ್ಟಿಗೆ ಅರ್ಜಿ ಸಲ್ಲಿಸಿದವರು ಇಲ್ಲಿ ಬಂದು ಬಾಬಾ ದರ್ಶನ ಮಾಡಿದರೆ ಯಾವುದೇ ಅಡೆತಡೆ ಇಲ್ಲದೇ ಪಾಸ್ ಪೋರ್ಟ್ ಆಗುತ್ತದೆ ಹಾಗೂ ವಿದೇಶ ಯೋಗವೂ ಬೇಗನೆ ಕೂಡಿ ಬರುತ್ತದೆ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಈ ಸಮಾಧಿ ಸೂಫಿ ಸಂತರಿಗೆ ಸೇರಿದ್ದೆಂಬ ಮಾಹಿತಿಯಿದ್ದು, ಆಗಮಿಸುವ ನೂರಾರು ಭಕ್ತರು ಪಾಸ್ ಪೋರ್ಟ್ ಕುರಿತಾಗಿಯೇ ತಮ್ಮ ಬೇಡಿಕೆ ಸಲ್ಲಿಸುವ ಕಾರಣ ‘ಪಾಸ್ ಪೋರ್ಟ್ ಬಾಬಾ’ ಎಂಬ ಹೆಸರೂ ಇದಕ್ಕೆ ಬಂದಿದೆ. ತಮ್ಮ ಬೇಡಿಕೆ ಈಡೇರಿದರೆ ಭಕ್ತರು ತಮ್ಮ ಪಾಸ್ ಪೋರ್ಟಿನ ಒಂದು ಕಾಪಿಯನ್ನು ಇಲ್ಲಿರುವ ಮರಕ್ಕೆ ಸಿಗಿಸುತ್ತಾರೆ.