ನವದೆಹಲಿ: ಕೊರೊನಾ ನಡುವೆಯೂ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಸಂಸತ್ ಮುಂಗಾರು ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.
ಕ್ಯಾಬಿನೆಟ್ ಕಮಿಟಿ ಸಂಸತ್ ಮುಂಗಾರು ಅಧಿವೇಶನ ನಡೆಸಲು ಶಿಫಾರಸು ಮಾಡಿದ್ದು, 18 ಕಲಾಪಗಳು ಅಧಿವೇಶನದಲ್ಲಿ ನಡೆಯಲಿವೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಗ್ಯಾಲರಿ, ಚೇಂಬರ್ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಎರಡೂ ಸದನದ ಸದಸ್ಯರಿಗೆ ಮೀಸಲಿಡಲಾಗಿದೆ. ಈಗಾಗಲೇ ಅಧಿವೇಶನಕ್ಕೆ ಪೂರ್ವತಯಾರಿ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.