ನವದೆಹಲಿ: ಕೊರೊನಾ ನಡುವೆಯೂ ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸರಾಜ್, ಛತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ, ಗವರ್ನರ್ ಲಾಲ್ ಜಿ ಟಂಡನ್, ಉತ್ತರಪ್ರದೇಶ ಸಚಿವರಾದ ಕಮಲ ರಾಣಿ, ಚೇತನ್ ಚವಾಣ್, ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಸೇರಿದಂತೆ ಅಗಲಿದ ಗಣ್ಯರಿಗೆ ಸೂಚಿಸಲಾಗಿದೆ. ಸಂತಾಪದ ಬಳಿಕ ಸದನವನ್ನು 1 ಗಂಟೆ ಮುಂದೂಡಲಾಗಿದೆ.
ಇಂದಿನಿಂದ ಅಕ್ಟೋಬರ್ 1 ರ ವರೆಗೆ 18 ದಿನ ಅಧಿವೇಶನ ನಡೆಯಲಿದ್ದು, ಕೊರೋನಾ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪಾಳಿಯಲ್ಲಿ ರಾಜ್ಯಸಭೆ, ಲೋಕಸಭೆ ಅಧಿವೇಶನ ನಡೆಯಲಿದೆ.